
ಉದಯವಾಹಿನಿ, ಸೀಬೆಹಣ್ಣು (ಪೇರಲ) ಅತ್ಯುತ್ತಮ ಪೌಷ್ಟಿಕಾಂಶದ ಮೂಲವಾಗಿದ್ದು, ಇದು ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇವುಗಳ ಜೊತೆಗೆ, ಇದು ದೇಹಕ್ಕೆ ವಿಟಮಿನ್ ಎ, ಬಿ, ಕೆ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕದಂತಹ ಅಂಶಗಳನ್ನು ಸಿಗಲಿದೆ. ಮಧ್ಯಮ ಗಾತ್ರದ ಸೀಬೆಹಣ್ಣು 112 ಕ್ಯಾಲೋರಿಗಳು, 23 ಗ್ರಾಂ ಕಾರ್ಬೋಹೈಡ್ರೇಟ್‌ಗಳು ಮತ್ತು 9 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಇದರಲ್ಲಿ ಪಿಷ್ಟ ಇರುವುದಿಲ್ಲ. ಇದರಲ್ಲಿ ಕೊಬ್ಬು ಮತ್ತು ಪ್ರೋಟೀನ್ ತುಂಬಾ ಕಡಿಮೆ.
ಸೀಬೆಹಣ್ಣು ಹಲ್ಲು ಮತ್ತು ಒಸಡುಗಳನ್ನು ಬಲವಾಗಿಡುತ್ತದೆ. ಇದರಲ್ಲಿರುವ ಸಂಕೋಚಕಗಳು ಹೊಟ್ಟೆಯನ್ನು ಆರೋಗ್ಯಕರವಾಗಿಡುತ್ತವೆ. ಅವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಸೀಬೆಹಣ್ಣಿನಲ್ಲಿ ನಾರಿನಂಶ ಹೆಚ್ಚಿರುವುದರಿಂದ, ಮಧುಮೇಹ ರೋಗಿಗಳು ಯಾವುದೇ ಸಮಸ್ಯೆಯಿಲ್ಲದೆ ಇದನ್ನು ತಿನ್ನಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡ ಸಹಯ ಮಾಡುತ್ತದೆ.
ನಿಯಮಿತವಾಗಿ ಸೀಬೆಹಣ್ಣು ತಿನ್ನುವುದರಿಂದ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ವಿಟಮಿನ್ ಎ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಹೃದಯದ ಆರೋಗ್ಯವನ್ನು ರಕ್ಷಿಸುವುದರ ಜೊತೆಗೆ, ಇದು ಮುಟ್ಟಿನ ನೋವನ್ನು ಸಹ ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರವಾಗಿದೆ.
ಸಿಪ್ಪೆಯೊಂದಿಗೆ ತಿನ್ನಬೇಕೇ? ಬೇಡವೇ? ಪೌಷ್ಟಿಕಾಂಶ ತಜ್ಞರು ದೀಪ್ಶಿಖಾ ಜೈನ್ ಅವರ ಪ್ರಕಾರ, ಸಿಪ್ಪೆಯೊಂದಿಗೆ ಸೀಬೆಹಣ್ಣು ತಿನ್ನುವುದರಿಂದ ಪೊಟ್ಯಾಸಿಯಮ್, ಸತು ಮತ್ತು ವಿಟಮಿನ್ ಸಿ ನಂತಹ ಸೂಕ್ಷ್ಮ ಪೋಷಕಾಂಶಗಳು ದೊರೆಯುತ್ತವೆ. ಇವು ಚರ್ಮದ ಸೌಂದರ್ಯ ಮತ್ತು ಉತ್ತಮ ಆರೋಗ್ಯಕ್ಕೆ ನೆರವಾಗಲಿವೆ. ಆದಾಗ್ಯೂ, ಹೆಚ್ಚಿನ ಕೊಲೆಸ್ಟ್ರಾಲ್ ಅಥವಾ ಮಧುಮೇಹ ಇರುವವರು ಸಿಪ್ಪೆ ರಹಿತ ಹಣ್ಣನ್ನ ತಿನ್ನುವುದು ಉತ್ತಮ. ಕೆಲವು ವರದಿಗಳು, ಸಿಪ್ಪೆಯೊಂದಿಗೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಲಿಪಿಡ್ ಪ್ರೊಫೈಲ್ ಹೆಚ್ಚಾಗಬಹುದು ಎಂದು ಹೇಳಿವೆ.ಸೀಬೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫ್ರಕ್ಟೋಸ್ ಅಧಿಕವಾಗಿದೆ. ಇದನ್ನು ಹೆಚ್ಚು ತಿನ್ನುವುದರಿಂದ ಗ್ಯಾಸ್ ಮತ್ತು ಎದೆಯುರಿ ಉಂಟಾಗುತ್ತದೆ. ಫ್ರಕ್ಟೋಸ್ ಮಾಲಾಬ್ಸರ್ಪ್ಷನ್ ನಿಂದ ಬಳಲುತ್ತಿರುವ ಜನರು ನೈಸರ್ಗಿಕ ಸಕ್ಕರೆಗಳ ಕೊರತೆಯಿಂದಾಗಿ ಉಬ್ಬುವುದು ಅನುಭವಿಸಬಹುದು.
