ಉದಯವಾಹಿನಿ, ಮನೆಯಲ್ಲಿ ರಾತ್ರಿ ಮಾಡಿದ ರೊಟ್ಟಿ ಅಥವಾ ಚಪಾತಿಗಳು ಮರುದಿನ ಬೆಳಗ್ಗೆ ಉಳಿದುಹೋಗುವುದು ಸಾಮಾನ್ಯ. ಅಥವಾ ಬೆಳಗ್ಗೆ ಮಾಡಿದ್ದು ಕೂಡ ಸಂಜೆ ವೇಳೆಗೆ ಮಿಕ್ಕಿರುತ್ತೆ. ಅಂತಹ ಹಳೇ ರೊಟ್ಟಿಗಳನ್ನು ಅಥವಾ ಚಪಾತಿಯನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ ಮತ್ತು ಹೆಚ್ಚಿನ ವೇಳೆ ಅದನ್ನು ಬಿಸಾಡುತ್ತಾರೆ. ಆದರೆ, ಈ ಉಳಿದ ರೊಟ್ಟಿಗಳನ್ನು ಬಳಸಿಕೊಂಡು ನೀವು ಕೇವಲ 10 ನಿಮಿಷಗಳಲ್ಲಿ ರುಚಿಕರವಾದ ರೊಟ್ಟಿ ಪಿಜ್ಜಾ ತಯಾರಿಸಬಹುದು.
ಹೌದು ಈ ರೊಟ್ಟಿ ಪಿಜ್ಜಾ ಸ್ಮಾರ್ಟ್ ರೆಸಿಪಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಸ್ನ್ಯಾಕ್ಸ್ ಆಗಿದೆ. ಒಮ್ಮೆ ಮಾಡಿ ತಿಂದ್ರೆ ಬಾಯಿ ಚಪ್ಪರಿಸುತ್ತಾ ತಿನ್ನುತ್ತಾ ಮತ್ತೆ ಮತ್ತೆ ಬೇಕು ಅನ್ನೋದು ಜ್ಜಾ!
ಸಾಮಾನ್ಯ ಪಿಜ್ಜಾಗಳು ಮೈದಾ ಹಿಟ್ಟಿನಿಂದ ತಯಾರಾಗುತ್ತವೆ, ಇದು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಆದರೆ ಈ ರೊಟ್ಟಿ ಪಿಜ್ಜಾ ಗೋಧಿಯ ರೊಟ್ಟಿಯನ್ನು ಬೇಸ್ ಆಗಿ ಬಳಸುವುದರಿಂದ ಹೆಚ್ಚು ಆರೋಗ್ಯಕರವಾಗಿದೆ. ಮನೆಯಲ್ಲಿರುವ ಸಾಮಾನ್ಯ ತರಕಾರಿಗಳನ್ನೇ ಬಳಸಿ ತಯಾರಿಸಬಹುದು. ಇದು ಬಜೆಟ್ ಸ್ನೇಹಿ ಮತ್ತು ಹೊರಗಿನ ಜಂಕ್ ಫುಡ್‌ಗೆ ಅತ್ಯುತ್ತಮ ಪರ್ಯಾಯವಾಗಿದೆ. ಆಹಾರವನ್ನು ವ್ಯರ್ಥ ಮಾಡದೇ ಮರುಬಳಕೆ ಮಾಡುವ ಈ ರೀತಿಯ ರೆಸಿಪಿಗಳು ಒಳ್ಳೆಯದು.
ರೊಟ್ಟಿ ಪಿಜ್ಜಾ ತಯಾರಿಸಲು ಬೇಕಾಗುವ ಸಾಮಗ್ರಿಗಳು!
ಉಳಿದ ರೊಟ್ಟಿ ಅಥವಾ ಚಪಾತಿ – 2 ರಿಂದ 3
ಪಿಜ್ಜಾ ಸಾಸ್ – 2-3 ಚಮಚ (ಇಲ್ಲದಿದ್ದರೆ ಟೊಮೆಟೊ ಕೆಚಪ್ ಬಳಸಿ)
ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
ಕ್ಯಾಪ್ಸಿಕಂ – ಅರ್ಧ (ಸಣ್ಣಗೆ ಹೆಚ್ಚಿದ್ದು)
ಟೊಮೆಟೊ – 1 (ಬೀಜ ತೆಗೆದು ಸಣ್ಣಗೆ ಹೆಚ್ಚಿದ್ದು)
ಬೇಯಿಸಿದ ಸ್ವೀಟ್ ಕಾರ್ನ್ – 2 ಚಮಚ
ತುರಿದ ಚೀಸ್ (ಮೋಜರೆಲ್ಲಾ ಅಥವಾ ಪ್ರೊಸೆಸ್ಡ್ ಚೀಸ್) – ಅಗತ್ಯಕ್ಕೆ ತಕ್ಕಂತೆ
ಒರೆಗಾನೊ ಮತ್ತು ಚಿಲ್ಲಿ ಫ್ಲೇಕ್ಸ್ – ರುಚಿಗೆ ತಕ್ಕಂತೆ
ಉಪ್ಪು – ಚಿಟಿಕೆ
ಬೆಣ್ಣೆ ಅಥವಾ ಆಲಿವ್ ಆಯಿಲ್ – ಸ್ವಲ್ಪ
