ಉದಯವಾಹಿನಿ, ಇನ್ನೇನು ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿದೆ, ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ. ಯಾವುದೇ ಹಬ್ಬ ಬಂದರೂ, ಹಬ್ಬ ಅಂದ್ರೆ ಸಾಕು ವಿಧ ವಿಧವಾಗಿ ಅಡುಗೆ ಮಾಡೋದೇ ಒಂಥರಾ ಖುಷಿ. ಅದರಲ್ಲೂ ಮನೆಯಲ್ಲಿ ತುಂಬಾ ಜನ ಇದ್ದರಂತು ಇನ್ನೂ ಹೆಚ್ಚಿನ ಸಡಗರ ಮನೆ ಮಾಡಿರುತ್ತೆ. ಹಬ್ಬದಡುಗೆ ಮಾಡಿ ದೇವರಿಗೆ ನೈವೇದ್ಯ ಇಟ್ಟು ಕೊನೆಗೆ ಎಲ್ಲರೂ ಜೊತೆಗೂಡಿ ಊಟ ಮಾಡುವುದರೊಂದಿಗೆ ಹಬ್ಬ ಸಂಪನ್ನವಾಗುತ್ತೆ.
ಆದರೆ ಮನೆಯಲ್ಲಿ ಸಾಮಾನ್ಯವಾಗಿ ಮಾಡಿದ ಅಡುಗೆ, ಸಿಹಿ ತಿಂಡಿಗಳನ್ನೇ (Recipe) ಯಾಕೆ ಮಾಡ್ತೀರಾ ಅನ್ನೋ ಮಾತು ಹೆಚ್ಚಾಗಿ ಕೇಳಿ ಬರುತ್ತೆ. ಹಾಗಾದರೆ ಈ ಮುಂದಿನ ಹಬ್ಬಕ್ಕೆ ಈ ಬಾರಿ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ ಕಡಲೆಬೇಳೆ ಪಾಯಸ ಮಾಡಿ ನೋಡಿ. ಸಕ್ಕತಾಗಿರುತ್ತೆ.
ಈ ಸಂಕ್ರಾಂತಿ ಹಬ್ಬ ಅಂದ್ರೆ ವರ್ಷದ ಮೊದಲ ಹಬ್ಬ ಅಂತಾರೆ, ಅಂದ್ರೆ ಕ್ಯಾಲೆಂಡರ್ ಪ್ರಕಾರ ಹಳೇ ವರ್ಷ ಹೋಗಿ ಹೊಸ ವರ್ಷ ಬರುತ್ತದೆ. ಅದರಲ್ಲೂ ಈ ಸಂಕ್ರಾಂತಿ ಹಬ್ಬಕ್ಕೆ ಎಲ್ಲರ ಮನೆಯಲ್ಲೂ ಎಳ್ಳು, ಬೆಲ್ಲ ಮತ್ತು ಅದರ ಜೊತೆಗೆ ಸಿಹಿ ತಿಂಡಿಗಳನ್ನು ಕೂಡ ಮಾಡುತ್ತಾರೆ. ಈ ಸಮಯದಲ್ಲಿ ಕಡಲೆಬೇಳೆಯ ನೈವೇದ್ಯ ಹೆಚ್ಚು ಪ್ರಿಯ. ಈ ಹಬ್ಬಕ್ಕೆ ಡಿಫರೆಂಟ್ ಸ್ಟೈಲಲ್ಲಿ ಕಡಲೆಬೇಳೆ ಪಾಯಸ ಮಾಡೋದನ್ನು ಇಲ್ಲಿ ನೋಡೋಣ ಬನ್ನಿ.
ಕಡಲೆಬೇಳೆ ಪಾಯಸದಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಮಿಶ್ರಣ ಇರೋದ್ರಿಂದ ಆರೋಗ್ಯಕ್ಕೂ ಒಳ್ಳೆಯದು. ತೆಂಗಿನಕಾಯಿ ಮತ್ತು ಬೆಲ್ಲದ ಖಾದ್ಯಗಳು ಹೆಚ್ಚು ಸ್ವಾದವಾಗಿಯೂ ಇರುತ್ತೆ. ಹಬ್ಬದಂದು ಈ ರೆಸಿಪಿಗೆ ಹೆಚ್ಚು ಡಿಮ್ಯಾಂಡ್. ಊಟದ ಬಳಿಕ ಸೇವಿಸಿದರೆ ನಿದ್ರೆಯೂ ಚೆನ್ನಾಗಿ ಆಗುತ್ತೆ.
ಕಡಲೆಬೇಳೆ ಪಾಯಸಕ್ಕೆ ಬೇಕಾದ ಸಾಮಾಗ್ರಿಗಳು!
ಕಡಲೆಬೇಳೆ: 250 ಗ್ರಾಂ
ಬೆಲ್ಲ: 400 ಗ್ರಾಂ
ಅರ್ಧ ತೆಂಗಿನಕಾಯಿ
ದೋಸೆ ಅಕ್ಕಿ: 1 ಹಿಡಿಯಷ್ಟು
ನೀರು: 5 ಗ್ಲಾಸ್
ತುಪ್ಪ : 2 ಚಮಚ
ಗೋಡಂಬಿ: 15
ಒಣದ್ರಾಕ್ಷಿ: 10
ಏಲಕ್ಕಿ: 2
