ವಿಠಲ ಕೆಳೂತ್
ಉದಯವಾಹಿನಿ,ಮಸ್ಕಿ: ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಮೂಲಕ ಪ್ರತಿ ವಾರ ಸಮಾಜಮುಖಿ ಚಟುವಟಿಕೆಯಲ್ಲಿ ಕೈಗೊಳ್ಳುತ್ತಿದ್ದ ಅಭಿನಂದನ ಸಂಸ್ಥೆಯ ಸಂಚಾಲಕ ರಾಮಣ್ಣ ಹಂಪರಗುಂದಿಗೆ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಒಲಿದು ಬಂದಿದೆ. ಹೌದು ಪಟ್ಟಣದ ಪರಾಪೂರ ರಸ್ತೆಯಲ್ಲಿನ ಅಭಿನಂದನ ಸ್ಪೂರ್ತಿಧಾಮ ಸಂಚಾಲಕ ರಾಮಣ್ಣ ಹಂಪರಗುಂದಿ ಹಾಗೂ ಅವರ ಪತ್ನಿ ಶೃತಿ ಹಂಪರಗುAದಿ ಅವರು ಬಡ ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸ ಅಷ್ಟೇ ಅಲ್ಲದೇ ಪ್ರತಿ ಭಾನುವಾರ ಸರ್ಕಾರಿ ಸ್ಥಳಗಳನ್ನು ಗುರುತಿಸಿ ಅದನ್ನು ಸ್ವಚ್ಚಗೊಳಿಸಿ, ಅಲ್ಲಿನ ಕಟ್ಟಡಗಳಿಗೆ ಬಣ್ಣ ಹಚ್ಚುವ ಮೂಲಕ ಆ ಕಟ್ಟಡಗಳಿಗೆ ಹೊಸ ವಿನ್ಯಾಸ ನೀಡುತ್ತಿದ್ದರು. ಇದುವೆರೆಗೆ ೧೦೬ ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನ ಮಾಡುವುದರ ಮೂಲಕ ಸರ್ಕಾರಿ ಶಾಲೆ, ಬಸ್ ನಿಲ್ದಾಣ, ಉದ್ಯಾನವನ, ದೇವಾಲಯ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳ ಆವರಣವನ್ನು ಸ್ವಚ್ಚಗೊಳಿಸಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಭಾಗದಲ್ಲಿ ಗುರುತಿಸಿಕೊಂಡಿದ್ದಾ
ರೆ. ಸಾರ್ವಜನಿಕ ಕಟ್ಟಡಗಳಿಗೆ ಬಣ್ಣ ಲೇಪಿಸಿ ಕಟ್ಟಡಗಳಿಗೆ ಹೊಸ ವಿನ್ಯಾಸ ಕೊಡುತ್ತಿದ್ದ ಅಭಿಯಾನದ ತುಣುಕುಗಳನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಕಳುಹಿಸಲಾಗಿದೆ, ಅಭಿನಂದನ ಸಂಸ್ಥೆಯ ಕಾರ್ಯಕ್ಕೆ ಮೆಚ್ಚಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ನೀಡಿದ್ದು, ಪ್ರಶಸ್ತಿಯನ್ನು ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಶ್ರೀಗಳಿಂದ ಸ್ವೀಕರಿಸಿ ಶ್ರೀಗಳ ಆರ್ಶಿವಾದ ಪಡೆದುಕೊಂಡರು. ಅಭಿನಂದನ ಸಂಸ್ಥೆಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ, ವಿವಿಧ ಕ್ಷೇತ್ರದ ಗಣ್ಯರು, ಮುಖಂಡರು, ಜನಪ್ರತಿನಿಧಿಗಳು ಹಂಪರಗುAದಿ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.
