ಉದಯವಾಹಿನಿ, ಬೆಂಗಳೂರು: ಸಿಎಂ, ಡಿಸಿಎಂ ನಡುವೆ ಕಾಂಪ್ರಮೈಸ್ ಥಿಯರಿ ಸಿದ್ಧವಾಗಿದ್ಯಾ? ಎಂಬ ಬಿಸಿಬಿಸಿ ಚರ್ಚೆ ಜೋರಾಗಿದೆ. 3 ತಿಂಗಳು ಕದನ ವಿರಾಮ ವಿಸ್ತರಣೆ ಜೊತೆಗೆ ಸಿದ್ದರಾಮಯ್ಯ ದಾಖಲೆ ಬಜೆಟ್ ಮಂಡನೆಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಸಿಎಂ, ಡಿಸಿಎಂ ಕಾಂಗ್ರೆಸ್ ಹೈಕಮಾಂಡ್‌ಗೆ ಸ್ಮೂತ್ ಆಪ್ಶನ್ ಕೊಡ್ತಾರಾ? ಎಂಬ ಕುತೂಹಲ ಮನೆ ಮಾಡಿದೆ. ಇನ್ನೂ ನಮ್ಮ ನಡುವೆ ಯಾವುದೇ ಕಾಳಗವೇ ಇಲ್ಲ. ಕಾಳಗ ಎಲ್ಲಿದೆ..? ಎಂದು ನಿನ್ನೆಯಷ್ಟೇ ಪವರ್ ಶೇರ್ ವಾರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಲ್ ರಿಯಾಕ್ಷನ್ ಕೊಟ್ಟಿದ್ರೆ, ಹೈಕಮಾಂಡ್ ಮೇಲೆ ವಿಶ್ವಾಸ ಇದೆ.
ನನಗೆ ಅರ್ಜೆಂಟ್ ಇಲ್ಲ ಅಂತ ಡಿಕೆಶಿ ಅಸ್ತ್ರ ಪ್ರಯೋಗಿಸಿದ್ದಾರೆ. ಅಷ್ಟೇ ಅಲ್ಲ ಹಲವು ದಿನಗಳಿಂದ ಸಿದ್ದರಾಮಯ್ಯ ಜೊತೆಯಲ್ಲೇ ಡಿಕೆಶಿ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿರುವುದು ವಿಶೇಷ. ಹಾಗಾಗಿ ಪವರ್ ಶೇರ್ ಬಗ್ಗೆ ಏನೇ ಕೇಳಿದ್ರೂ ಇಬ್ಬರಿಂದಲೂ ಕೂಲ್ ಪಿರಿಯೆಡ್ ಮಾತುಗಳು ಹೊರಬೀಳುತ್ತಿರುವುದು ಸಾಕಷ್ಟು ಲೆಕ್ಕಾಚಾರ ಹುಟ್ಟು ಹಾಕಿವೆ.
ಒಟ್ನಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ನಾಯಕತ್ವ ಗೊಂದಲಕ್ಕೆ ತೆರೆ ಬೀಳುವ ನಿರೀಕ್ಷೆ ಇದ್ದು, ಸಿಎಂ, ಡಿಸಿಎಂ ಕಾಂಪ್ರಮೈಸ್ ಥಿಯರಿಯಿಂದ ಕಾಂಗ್ರೆಸ್ ಹೈಕಮಾಂಡ್ ಧರ್ಮಸಂಕಟದಿಂದ ಪಾರಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.
