ಉದಯವಾಹಿನಿ, ಬೆಂಗಳೂರು: ನಾನ್ ಕನ್ನಡಿಗ ಹೆಚ್‌ಆರ್ ಕೆಲಸಕ್ಕೆ ಬೇಕು ಎಂದು ಪ್ರಕಟಣೆ ಹೊರಡಿಸಿ ಕನ್ನಡಿಗರನ್ನು ಕೆರಳಿಸಿದ್ದ ಖಾಸಗಿ ಕಂಪನಿ ಇದೀಗ ಕ್ಷಮೆಯಾಚನೆ ಮಾಡಿದೆ.
ಸ್ಕಿಲ್ ಸೋನಿಕ್ಸ್ ಎಂಬ ಕಂಪನಿ ನಾನ್ ಕನ್ನಡಿಗ ಹೆಚ್‌ಆರ್ ಕೆಲಸಕ್ಕೆ ಬೇಕು ಎಂದು ನೌಕರಿ ಡಾಟ್ ಕಾಮ್‌ನಲ್ಲಿ ಪ್ರಕಟಣೆ ಹೊರಡಿಸಿತ್ತು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಸಂಘಟನೆಯವರು ಜೆಪಿ ನಗರದ ಸಂಸ್ಥೆಯ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದರು. ಸಾಮಾಜಿಕ ಜಾಲಾತಾಣದಲ್ಲಿಯೂ ಈ ಪ್ರಕಟಣೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸ್ಕಿಲ್ ಸೋನಿಕ್ಸ್ ಕಂಪನಿ ಮ್ಯಾನೇಜರ್ ಕ್ಷಮೆಕೋರಿದ್ದಾರೆ. ಇದು ಕೋಲ್ಕತ್ತಾ ವಿಭಾಗದಿಂದ ಆದ ಪ್ರಮಾದ. ಕನ್ನಡಿಗರ ವಿರೋಧದ ಬಳಿಕ ಈ ನೇಮಕಾತಿ ಪ್ರಕಟಣೆ ರದ್ದು ಮಾಡಿದ್ದೇವೆ. ಅಚಾತುರ್ಯದಿಂದ ಆಗಿರುವ ಘಟನೆಗೆ ಕ್ಷಮೆ ಇರಲಿ ಅಂತಾ ಕನ್ನಡಿಗರನ್ನು ಕೈಮುಗಿದು ಕ್ಷಮೆಯಾಚಿಸಿದ್ದಾರೆ.
