ಉದಯವಾಹಿನಿ, ಅಧಿಕ ಸೆಖೆಯೂ ಇಲ್ಲ; ಅಧಿಕ ಚಳಿಯೂ ಅಲ್ಲ. ಆದ್ದರಿಂದ ಮಳೆಗಾಲವನ್ನು ಉತ್ತಮ ಋತು ಎಂದು ಸಾಮಾನ್ಯವಾಗಿ ಬಣ್ಣಿಸಲಾಗುತ್ತದೆ. ಆದರೆ ತೇವಾಂಶದ ವಾತಾವರಣ ಫಂಗಸ್ ಮತ್ತು ಬ್ಯಾಕ್ಟಿರಿಯಾ ಬೆಳೆಯಲು ಪೂರಕ ವಾತಾವರಣ ಒದಗಿಸುವುದರಿಂದ ಸಹಜವಾಗಿಯೇ ತ್ವಚೆಯ ಸೋಂಕುಗಳ ಸಾಧ್ಯತೆ ಹೆಚ್ಚು. ಹಾಗಾದರೆ ಸಾಮಾನ್ಯವಾಗಿ ಕಂಡುಬರುವ ಚರ್ಮದ ಸಮಸ್ಯೆಗಳನ್ನು ತಡೆಯಲು ಮಳೆಗಾಲದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಆರೋಗ್ಯ ತಜ್ಞರು ಸಲಹೆಗಳನ್ನು ನೀಡುತ್ತಾರೆ.
ಪುಣೆಯ ರೂಬಿಹಾಲ್ ಕ್ಲಿನಿಕ್‌ನ ಚರ್ಮರೋಗ ತಜ್ಞೆ ಡಾ.ರಶ್ಮಿ ಅಡೆರಾವೊ ಅವರ ಪ್ರಕಾರ, “ಮಳೆಗಾಲದಲ್ಲಿ ಬೆವರುವಿಕೆಯು ಚರ್ಮದ ಕಿರಿಕಿರಿಗೆ ಕಾರಣವಾಗುತ್ತದೆ ಹಾಗೂ ಫಂಗಸ್ ಮತ್ತು ಬ್ಯಾಕ್ಟಿರಿಯಾಗಳ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗುತ್ತದೆ. ತಾಪಮಾನ ದಿಢೀರನೇ ಬದಲಾಗುವುದು ಚರ್ಮದ ಒಳಭಾಗದಲ್ಲಿ ನೀರಿನ ಅಂಶ ಕಡಿಮೆಯಾಗಿ ಇಸುಬು ರೋಗಕ್ಕೆ ಕಾರಣವಾಗುತ್ತದೆ. ತೇವಾಂಶಯುಕ್ತ ವಾತಾವರಣ ಆಸ್ತಮಾ ಹೆಚ್ಚಳಕ್ಕೆ ಚರ್ಮದ ಸಮಸ್ಯೆಗಳಿಗೆ ಅಥವಾ ತುರಿಕೆಗೆ ಕಾರಣವಾಗುತ್ತದೆ. ಹೆಚ್ಚಿನ ತೇವಾಂಶ ಉಳಿದುಕೊಳ್ಳುವುದು ಫಂಗಸ್ ಸೋಂಕಿಗೆ ಕಾರಣವಾಗುತ್ತದೆ. ಒದ್ದೆ ಬಟ್ಟೆಯಿಂದಾಗಿ ರಿಂಗ್‌ವರ್ಮ್‌ನಂಥ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
