ಬೆಳಗಿನ ಉಪಹಾರದಲ್ಲಿ ಅನೇಕರು ದೋಸೆಯನ್ನು ಸೇವಿಸಲು ಬಲು ಇಷ್ಟಪಡುತ್ತಾರೆ. ಈ ಚಳಿಗಾಲದ ತಂಪಾದ ವಾತಾವರಣವಿದ್ದಾಗ ಬೆಳಗ್ಗೆ ಬಿಸಿ ದೋಸೆ ಸೇವಿಸುವುದು ಅದ್ಭುತ ರುಚಿ ನೀಡುತ್ತದೆ. ದೋಸೆಗಳನ್ನು ನಿಮ್ಮ ನೆಚ್ಚಿನ ಶೇಂಗಾ, ಟೊಮೆಟೊ, ತೆಂಗಿನಕಾಯಿ ಕೊಬ್ಬರಿ ಚಟ್ನಿಯೊಂದಿಗೆ ತಿಂದರೆ ಅದರ ರುಚಿ ಸಖತ್ ಆಗಿರುತ್ತದೆ. ದೋಸೆ ಮಾಡುವ ವಿಧಾನದಲ್ಲಿ ಎಣ್ಣೆ ಬಳಸಬೇಕಾಗುತ್ತದೆ.
ಅತಿಯಾಗಿ ಅಡುಗೆಗಳಲ್ಲಿ ಎಣ್ಣೆಯನ್ನು ಬಳಕೆ ಮಾಡುವುದು ಆರೋಗ್ಯಕ್ಕೂ ಸಮಸ್ಯೆಯಾಗುತ್ತದೆ. ಹೊಸ ರೀತಿಯಲ್ಲಿ ದೋಸೆ ಮಾಡುವ ವಿಧಾನ ಇಲ್ಲಿದೆ. ಒಂದು ಹನಿ ಎಣ್ಣೆ ಇಲ್ಲದೇ ಈ ದೋಸೆ ತಯಾರಿಸಬಹುದು. ಇದೀಗ ಸಖತ್ ರುಚಿಕರವಾದ ದೋಸೆ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಒಂದು ಕಪ್ – ಅಕ್ಕಿ, ಒಂದು ಕಪ್ – ಅವಲಕ್ಕಿ, ಒಂದು ಕಪ್ – ಚುರುಮುರಿ, 1/2 ಕಪ್ – ಇಡ್ಲಿ ರವಾ
2 ಟೀಸ್ಪೂನ್ – ಮೆಂತ್ಯ, ಒಂದು ಟೀಸ್ಪೂನ್ – ಮೆಣಸಿನ ಪುಡಿ, 1/4 ಕಪ್ – ಕೊತ್ತಂಬರಿ ಸೊಪ್ಪು
1 ಟೀಸ್ಪೂನ್ – ಶುಂಠಿ, ಹಸಿ ಮೆಣಸಿನಕಾಯಿ ಪೇಸ್ಟ್, ಒಂದು ಚಿಟಿಕೆ – ಉಪ್ಪು
ಗರಿಗರಿಯಾದ ದೋಸೆ ತಯಾರಿಸಲು ಮೊದಲಿಗೆ, ಬೆಳಗ್ಗೆ ಒಂದು ಬಟ್ಟಲಿನಲ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಹಾಕಿ ಎರಡು ಬಾರಿ ಸ್ವಚ್ಛ ಮಾಡಿ. ಬಳಿಕ ಒಳ್ಳೆಯ ನೀರು ಸುರಿದು ಅವು ಮುಳುಗುವವರೆಗೆ ನೆನೆಸಿಕೊಳ್ಳಿ. ರಾತ್ರಿ ನೀರನ್ನು ಸೋಸಿ, ಮೆಂತ್ಯ ಮತ್ತು ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಚೆನ್ನಾಗಿ ರುಬ್ಬಿದ ಬಳಿಕ ಅದಕ್ಕೆ ಇಡ್ಲಿ ರವೆ ಸೇರಿಸಿ. ಎಲ್ಲವನ್ನೂ ಮಿಶ್ರಣ ಮಾಡಿ ರಾತ್ರಿಯಿಡೀ ನೆನೆಸಬೇಕು.
ಬಳಿಕ ಈ ಹಿಟ್ಟಿಗೆ ಐದು ಅಥವಾ ಆರು ಹಸಿ ಮೆಣಸಿನಕಾಯಿಗಳು, ಎರಡು ಇಂಚು ಶುಂಠಿಯನ್ನು ಹಾಕಿ ರುಬ್ಬಿಕೊಳ್ಳಿ.
ನೆನೆಸಿದ ಹಿಟ್ಟಿಗೆ ಈ ಮೆಣಸಿನಕಾಯಿ ಪೇಸ್ಟ್, ಮೆಂತ್ಯ ಬೀಜಗಳು, ಕೊತ್ತಂಬರಿ ಸೊಪ್ಪು ಹಾಗೂ ಮೆಣಸಿನ ಪುಡಿಯನ್ನು ಸೇರಿಸಿ. ಸಾಕಷ್ಟು ನೀರು ಸೇರಿಸಿ ಮಿಶ್ರಣ ಮಾಡಿ.
