ಉದಯವಾಹಿನಿ, ವೆಸ್ಟ್ ಪಾಯಿಂಟ್: ಅಮೆರಿದ ಮಿಸಿಸಿಪ್ಪಿಯಲ್ಲಿ ಯುಕನೊಬ್ಬ ಗ್ರಾಮೀಣ ಪ್ರದೇಶದಲ್ಲಿ ತನ್ನ ತಂದೆ ಸೇರಿ 6 ಮಂದಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ತಂದೆ, ಸಹೋದರ, ಚಿಕ್ಕಪ್ಪ, 7 ವರ್ಷದ ಸೋದರ ಸಂಬಂಧಿ ಬಾಲಕ, ಚರ್ಚ್ ಪಾದ್ರಿ ಮತ್ತು ಪಾದ್ರಿಯ ಸಹೋದರನನ್ನು ಭೀಕರವಾಗಿ ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ಮಿಸಿಸಿಪ್ಪಿ ಪ್ರದೇಶದಲ್ಲಿ ಮಧ್ಯರಾತ್ರಿಯ ಸೀಡರ್‌ಬ್ಲಫ್‌ನಲ್ಲಿ ಆರೋಪಿ ಡಾರಿಕಾ ಎಂ ಮೂರ್ (24)ನನ್ನು ಬಂಧಿಸಿದ್ದಾರೆ.ನಾಳೆ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾ ಅಟಾರ್ನಿ ಸ್ಕಾಟ್ ಕೊಲೊಮ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರೋಪಿಯೊಬ್ಬನೇ ಗುಂಡು ಹಾರಿಸಿದ್ದಾನೆ ಎಮದು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಆರೋಪಿ ಮೂರ್‌ನ ವಿಚಾರಣೆ ಮುಂದುವರಿಸಿದ್ದಾರೆ ಆದರೆ ಪ್ರಸ್ತುತ ಘಟನೆಗೆ ಪ್ರೇರೇಪಿಸಿದವರು ಮತ್ತು ಕಾರಣವೇನೆಂದು ತಿಳಿದಿಲ್ಲ ಎಂದು ಅವರು ಹೇಳಿದರು.ಇಂತಹ ಪರಿಸ್ಥಿತಿಯಲ್ಲಿ, ಕುಟುಂಬದ ಸದಸ್ಯರೆ ತಮದೇ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ ಎಂದು ಸ್ಕಾಟ್ ಹೇಳಿದರು.
ಗುಂಡಿನ ದಾಳಿಗಳು ಜಾಕ್ಸನ್‌ನಿಂದ ಈಶಾನ್ಯಕ್ಕೆ 200 ಕಿ.ಮೀ ದೂರದಲ್ಲಿರುವ ಹೊಲಗಳು, ಕಾಡುಗಳು ಮತ್ತು ಹೆಚ್ಚಾಗಿ ಸಾಧಾರಣ ಮನೆಗಳ ಪ್ರದೇಶದಲ್ಲಿ ನಡೆದಿದೆ..ಮೂರ್ ಮೊದಲು ತನ್ನ ತಂದೆ, ಗ್ಲೆನ್ ಮೂರ್,(67) ಅವರ ಸಹೋದರ, ಕ್ವಿಂಟನ್ ಮೂರ್(33) ಮತ್ತು ಅವರ ಚಿಕ್ಕವಿಲ್ಲಿ ಎಡ್ ಗೈನ್ಸ್ (55) ಅವರನ್ನು ಪಶ್ಚಿಮ ಕ್ಲೇ ಕೌಂಟಿಯ ಮನೆಯಲ್ಲಿ ಕೊಂದಿದ್ದಾನೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ.
ನಂತರ ಮೂರ್ ತನ್ನ ಸಹೋದರನ ಟ್ರಕ್ ಅನ್ನು ಕದ್ದು ಸೋದರಸಂಬಂಧಿಯ ಮನೆಗೆ ಅಲ್ಲಿ ಬಲವಂತವಾಗಿ ಒಳಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದನು ಎಂದು ಶೆರಿಫ್ ಹೇಳಿದರು. ಮೂರ್ 7 ವರ್ಷದ ಬಾಲಕಿಯ ತಲೆಗೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ ಎಂದು ಸ್ಕಾಟ್ ಹೇಳಿದ್ದಾರೆ, ಅದು ಎಷ್ಟು ಹಿಂಸಾತ್ಮಕವಾಗಿತ್ತು ಎಂದು ಹೇಳಲು ಆದದು ಎಂದು ಸ್ಕಾಟ್ ಹೇಳಿದರು.
