ಉದಯವಾಹಿನಿ, ಕೊರಾಪುಟ್ : 14 ವರ್ಷ ವಯಸ್ಸಿನ ಬಹುತೇಕ ಮಕ್ಕಳು ಶಾಲೆಯಿಂದ ಮನೆಗೆ ಹಿಂತಿರುಗಿದಾಗ, ಅವರ ಮನಸ್ಸಿನಲ್ಲಿ ಸಾಮಾನ್ಯವಾಗಿ ಎರಡು ವಿಷಯಗಳು ಇರುತ್ತವೆ. ಒಂದು ಮನೆಕೆಲಸ ಅಥವಾ ಫೋನ್ ನೋಡುವುದು. ಆದರೆ, ಹರ್ಷಿತಾ ಪ್ರಿಯದರ್ಶಿನಿ ಮೊಹಾಂತಿ ಅವರ ಮನಸ್ಸಿನಲ್ಲಿ ಬೇರೆಯೇ ಇತ್ತು. ಹೌದು, ದಕ್ಷಿಣ ಒಡಿಶಾದ ಕೊರಾಪುಟ್ ಜಿಲ್ಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಹರ್ಷಿತಾ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಉಳಿಸುವುದು ಮತ್ತು ನಿಧಾನವಾಗಿ ಕಣ್ಮರೆಯಾಗುತ್ತಿರುವ ದೇಸಿ ಬೀಜಗಳನ್ನು ಸಂರಕ್ಷಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಹರ್ಷಿತಾ ನೂರಾರು ಬಗೆಯ ಸಾಂಪ್ರದಾಯಿಕ ಧಾನ್ಯಗಳು ಮತ್ತು ಭತ್ತವನ್ನು ಸಂಗ್ರಹಿಸಿದ್ದಾರೆ. ಇದು ಒಡಿಶಾದ ಹಳ್ಳಿಗಳಾದ್ಯಂತ ರೈತರು ಹಳೆಯ, ಸುಸ್ಥಿರ ಕೃಷಿ ವಿಧಾನಗಳಿಗೆ ಮರಳಲು ಪ್ರೇರೇಪಿಸುತ್ತದೆ. ಈ ಪ್ರದೇಶದ ಜನರು ಈಗ ಹರ್ಷಿತಾರನ್ನು “ಸೀಡ್​ ಗರ್ಲ್”​ ಎಂದು ಕರೆಯುತ್ತಿದ್ದಾರೆ. 14ನೇ ವಯಸ್ಸಿಗೇ ಕೃಷಿ ಮೇಲೆ ಒಲವು: ಒಡಿಶಾದ ಹಲವು ಭಾಗಗಳಲ್ಲಿ ಸಾಂಪ್ರದಾಯಿಕ ಕೃಷಿ ವಿಧಾನಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಕೋಲ್ತಾ, ಕಂದುಲ್, ಮಂಡಿಯಾ ಮತ್ತು ದೇಸಿ ಭತ್ತದ ಪ್ರಭೇದಗಳಂತಹ ಸ್ಥಳೀಯ ಬೆಳೆಗಳ ಸ್ಥಾನವನ್ನು ನಿಧಾನವಾಗಿ ಹೈಬ್ರಿಡ್ ಬೀಜಗಳು ಆವರಿಸಿಕೊಳ್ಳುತ್ತಿವೆ. ಹರ್ಷಿತಾ ತನ್ನ ಪ್ರದೇಶದ ರೈತರೊಂದಿಗೆ ಚರ್ಚಿಸುವಾಗ ನಡೆಸುವಾಗ ಇದನ್ನು ಗಮನಿಸಿದರು. ಸಮಸ್ಯೆಯ ಬಗ್ಗೆ ಮಾತನಾಡುವ ಬದಲು, ಅದರ ಬಗ್ಗೆ ಏನಾದರೂ ಮಾಡಲು ನಿರ್ಧರಿಸಿದರು. 2023 ರಲ್ಲಿ ಬಾಲಕಿ “ಹರ್ಷಿತಾ ಪ್ರಿಯದರ್ಶಿನಿ ಬೀಜ ಮತ್ತು ಧಾನ್ಯಗಳ ಬ್ಯಾಂಕ್” ಸ್ಥಾಪಿಸಿದರು. ಮೊದಲ ವರ್ಷವೇ, ಅವರು ವಿವಿಧ ಬ್ಲಾಕ್‌ಗಳ ರೈತರಿಂದ ಸಾಂಪ್ರದಾಯಿಕ ಧಾನ್ಯಗಳು ಮತ್ತು ಬೆಳೆಗಳ ಬೀಜಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು.

ವೇಗವಾಗಿ ಬೆಳೆಯುತ್ತಿರುವ ಸರಳ ಪರಿಕಲ್ಪನೆ: ಹರ್ಷಿತಾ ಅವರ ಯೋಜನೆಯನ್ನು “ವಿನಿಮಯಕ್ಕಾಗಿ ಸಾಲ  ಎಂಬ ಸರಳ ವ್ಯವಸ್ಥೆಯಲ್ಲಿ ಮಾಡಲಾಗಿದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಹರ್ಷಿತಾ ರೈತರಿಗೆ 2 ಕೆ.ಜಿ ಸಾಂಪ್ರದಾಯಿಕ ಬೀಜಗಳನ್ನು ನೀಡುತ್ತಾರೆ. ಕೊಯ್ಲು ಮಾಡಿದ ನಂತರ, ರೈತರು 4 ಕೆ.ಜಿ ಭತ್ತ ಅಥವಾ ಬೀಜಗಳನ್ನು ಹಿಂತಿರುಗಿಸುತ್ತಾರೆ. ಈ ರೀತಿಯಾಗಿ, ಬೀಜ ಬ್ಯಾಂಕ್ ಬೆಳೆಯುತ್ತಲೇ ಇದೆ.
2024ರಲ್ಲಿ, ಸುಮಾರು 60 ರೈತರು ಈ ಉಪಕ್ರಮಕ್ಕೆ ಸೇರಿದರು, ಅದರಲ್ಲಿ 30 ಮಹಿಳಾ ರೈತರು ಸೇರಿದ್ದರು. 2025 ರ ಹೊತ್ತಿಗೆ, ಈ ಸಂಖ್ಯೆ 180ಕ್ಕೆ ತಲುಪಿತು ಮತ್ತು ಅವರಲ್ಲಿ ಸುಮಾರು 80% ಮಹಿಳೆಯರು. ಅನ್ಲಭಟ್ಟ ಗ್ರಾಮದಲ್ಲಿ ಸುಮಾರು 30 ಮಹಿಳಾ ರೈತರು ಮತ್ತು ಅವರ ಕುಟುಂಬಗಳು ಈಗ ಹರ್ಷಿತಾ ಅವರ ಬೀಜ ಬ್ಯಾಂಕಿನ ಬೆಂಬಲದೊಂದಿಗೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!