ಉದಯವಾಹಿನಿ, ಬಿಗ್‌ಬಾಸ್ ಸೀಸನ್ 12 ಫಿನಾಲೆ ವಾರಕ್ಕೆ ಬಂದು ನಿಂತಿದೆ. ಫಿನಾಲೆ ವಾರದ ಮೊದಲ ದಿನವೇ ಸ್ಪರ್ಧಿ ಮಲ್ಲಮ್ಮಗೆ ಅದೃಷ್ಟ ಒಲಿದಿದೆ. ಈಗಾಗ್ಲೇ ಮನೆಯಿಂದ ಹೊರಹೋದ ಮಲ್ಲಮ್ಮ ಇದೀಗ ಮತ್ತೆ ಬಿಗ್ ಮನೆಗೆ ಮರಳಿದ್ದಾರೆ.
ಗಿಲ್ಲಿಯನ್ನ ಕರೆದು ಮಾತನಾಡಿಸಿರುವ ಮಲ್ಲಮ್ಮ ಅದ್ಯಾಕೋ ಧ್ರುವಂತ್ ಜೊತೆ ಅಷ್ಟಾಗಿ ಬೆರೆಯದಾಗಿದ್ದಾರೆ. ಈ ಕಾರಣಕ್ಕೆ ಅಶ್ವಿನಿ ಜೊತೆ ಆ ವಿಚಾರ ಹೇಳಿಕೊಳ್ಳುವ ಧ್ರುವಂತ್ ಮಲ್ಲಮ್ಮ ಯಾಕೋ ಮೊದಲಿನಂತಿಲ್ಲ, ಸ್ವಲ್ಪ ಜರ್ಕ್ ಕಾಣಿಸ್ತಿದೆ ಎಂದು ಚರ್ಚೆ ಮಾಡಿದ್ದಾರೆ.
ಸದ್ಯಕ್ಕೆ ಇದೀಗ ಏಳು ಸ್ಪರ್ಧಿಗಳಿರುವ ಬಿಗ್‌ಬಾಸ್ ಮನೆ ಕೊಂಚ ಖಾಲಿಯಾಗಿದೆ. ಈಗಾಗ್ಲೇ ಮನೆಯಿಂದ ಹೊರಹೋಗಿ ಮತ್ತೆ ವಾಪಸ್ಸಾಗುವ ಅದೃಷ್ಟ ಮಲ್ಲಮ್ಮಗೆ ಒದಗಿ ಬಂದಿದೆ. ಅಂದಹಾಗೆ ಮಲ್ಲಮ್ಮ ಮತ್ತೆ ಸ್ಪರ್ಧೆಗಂತೂ ಬಂದವರಲ್ಲ. ಆದರೆ ಯಾವ ಉದ್ದೇಶಕ್ಕೆ ಮತ್ತೆ ಮನೆಗೆ ಬಂದ್ರು. ಮನೆಗೆ ಬಂದು ತಮ್ಮ ಜೊತೆ ಯಾರನ್ನಾದರೂ ಕರೆದುಕೊಂಡು ಹೋಗುತ್ತಾರೆಯೆ? ಇದೆಲ್ಲ ಚರ್ಚೆ ಎದ್ದಿದೆ.
ಆದರೆ ಮಲ್ಲಮ್ಮ ಬಂದಿದ್ದಕ್ಕೆ ಮನೆಯವರಿಗೆಲ್ಲರಿಗೂ ಖುಷಿಯಾಗಿದೆ. ಆದರೆ ಎಲ್ಲರ ನಡವಳಿಕೆ ಕಂಡುಕೊಂಡು ಬಂದಿರೋ ಮಲ್ಲಮ್ಮ ದೊಡ್ಮನೆಗೆ ರೀ ಎಂಟ್ರಿ ಕೊಟ್ಟ ವೇಳೆ ಸೆಲೆಕ್ಟೆಡ್ ಆಗಿದ್ದಾರೆ. ಒಟ್ಟಿನಲ್ಲಿ ಮಲ್ಲಮ್ಮನ ಉದ್ದೇಶ ಏನು? ಯಾಕಾಗಿ ಬಂದಿದ್ದಾರೆ ಅನ್ನೋದು ಇನ್ನು ಕೆಲವೇ ಹೊತ್ತಲ್ಲಿ ತಿಳಿಯುತ್ತದೆ.
