ಉದಯವಾಹಿನಿ, ದೇಶಿ ಕ್ರಿಕೆಟ್‌ ಹಾಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026) ಖ್ಯಾತ ಲೆಗ್‌ ಸ್ಪಿನ್ನರ್‌ ಕೆಸಿ ಕಾರಿಯಪ್ಪ ಅವರು ಸೋಮವಾ ಭಾರತೀಯ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಿದ್ದಾರೆ. 31ರ ವಯಸ್ಸಿನ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೃದಯಸ್ಪರ್ಶಿ ಪೋಸ್ಟ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ, ಬೀದಿಗಳಲ್ಲಿ ಆಟವಾಡುವುದರಿಂದ ಹಿಡಿದು ದೇಶಾದ್ಯಂತ ಕ್ರೀಡಾಂಗಣದ ದೀಪಗಳ ಅಡಿಯಲ್ಲಿ ಸ್ಪರ್ಧಿಸುವವರೆಗಿನ ಪ್ರಯಾಣವನ್ನು ನೆನಪಿಸಿಕೊಂಡಿದ್ದಾರೆ.

“ಬೀದಿಗಳಲ್ಲಿ ಆಟವಾಡುವುದರಿಂದ ಹಿಡಿದು ದೀಪಗಳ ನಡುವೆ ಕ್ರೀಡಾಂಗಣದಲ್ಲಿ ಹೆಮ್ಮೆಯಿಂದ ಜೆರ್ಸಿ ಧರಿಸಿ, ನಾನು ಒಮ್ಮೆ ಮಾತ್ರ ಕಲ್ಪಿಸಿಕೊಂಡಿದ್ದ ಕನಸನ್ನು ಬದುಕಿದೆ.” ಎಂದ ಬರೆದಿರುವ ಕಾರಿಯಪ್ಪ, “ಇಂದು, ನಾನು ಅಧಿಕೃತವಾಗಿ ಬಿಸಿಸಿಐ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತೇನೆ. ಈ ಪ್ರಯಾಣವು ನನಗೆ ಎಲ್ಲವನ್ನೂ ನೀಡಿತು. ನನ್ನನ್ನು ನಗುವಂತೆ ಮಾಡಿದ ವಿಜಯಗಳು, ನನ್ನನ್ನು ಮುರಿದ ಸೋಲುಗಳು ಮತ್ತು ನನ್ನನ್ನು ರೂಪಿಸಿದ ಪಾಠಗಳು,” ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಬರೆದಿದ್ದಾರೆ. ತಮ್ಮ ವಿದಾಯದ ಪತ್ರದಲ್ಲಿ ತಮ್ಮ ವೃತ್ತಿಜೀವನದಲ್ಲಿ ಬೆಂಬಲ ನೀಡಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಮತ್ತು ನಿರ್ಣಾಯಕ ಹಂತದಲ್ಲಿ ತಮ್ಮ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಮಿಜೋರಾಂ ಕ್ರಿಕೆಟ್ ಸಂಸ್ಥಗೆ ಕಾರಿಯಪ್ಪ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!