ಉದಯವಾಹಿನಿ, ಬೆಂಗಳೂರು: ಇಲ್ಲಿನ ಆಸ್ತಿಗಳನ್ನ ಅಡಮಾನ ಇಟ್ಟಿದ್ದು ಬಿಟ್ಟರೆ ಬೆಂಗಳೂರಿಗೆ ಬಿಜೆಪಿ ಸಾಧನೆ ಏನು ಇಲ್ಲ. 5 ಪಾಲಿಕೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ ಹೆಚ್ಚು ಕೊಡುಗೆ ಕೊಟ್ಟಿದೆ. ಬೆಂಗಳೂರಿಗೆ ಏರ್‌ಪೋರ್ಟ್, ಮೆಟ್ರೋ ತಂದಿದ್ದೇವೆ. ಬಿಜೆಪಿಯವರು 14 ಕಟ್ಟಡಗಳನ್ನು ಅಡ ಇಟ್ಟು ಹೋಗಿದ್ದರು. 6,000 ಕೋಟಿ ರೂ. ಸಾಲ ಇಟ್ಟು ಹೋಗಿದ್ದರು. ಇದೇ ಅವರ ಸಾಧನೆ. ನಾವು ಸಾಲ ತೀರಿಸಿ ಕಟ್ಟಡಗಳನ್ನ ಬಿಡಿಸಿಕೊಂಡಿದ್ದೇವೆ. ಟ್ರಾಫಿಕ್ ಕಡಿಮೆ ಆಗೊದಕ್ಕೆ 50 ಕಿ.ಮಿ ಫ್ಲೈ ಒವರ್ ಮಾಡುತ್ತಿದ್ದೇವೆ. ಟನಲ್ ರೋಡ್ ಬಗ್ಗೆ ಬಿಜೆಪಿಯವರು ಟೀಕೆ ಮಾಡ್ತಾರೆ. ಆದರೆ ಮುಂಬೈನಲ್ಲಿ ಎರಡು ಟನಲ್ ರಸ್ತೆ ಪ್ರಾರಂಭ ಮಾಡಿದ್ದಾರೆ. ಕಸದ ಸಮಸ್ಯೆ ಇದೆ, ಅದಕ್ಕಾಗಿ ಹಲವು ಯೋಜನೆ ಮಾಡ್ತಿದ್ದೇವೆ. ಮಹಿಳೆಯರಿಗೆ ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂದಿದ್ದಾರೆ.
ಜಿಬಿಎ ಚುನಾವಣೆ ಬಗ್ಗೆ ಮಾತನಾಡಿದ ಅವರು, ಜಿಬಿಎ ಚುನಾವಣೆಗೆ 5 ಪಾಲಿಕೆಗಳು, ದಕ್ಷಿಣದ್ದು ಒಂದು ಮೀಟಿಂಗ್ ಆಗಿದೆ. ಮೀಸಲಾತಿ ಆಗಿರಲಿಲ್ಲ, ಆದರೂ ಕೆಪಿಸಿಸಿ ಅಧ್ಯಕ್ಷರು ಅಭ್ಯರ್ಥಿಗಳ ಅರ್ಜಿಯನ್ನ ಕರೆದಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಜನರಲ್‌ನಲ್ಲಿ ಬಹಳ ಅರ್ಜಿಗಳು ಬಂದಿವೆ. ಇನ್ನೂ ಟೈಮ್ ಇದೆ ಏಪ್ರಿಲ್‌ಗೆ ಎಕ್ಸಾಂಗಳು ಮುಗಿದಿರುತ್ತದೆ. ಜೂನ್‌ನಲ್ಲಿ ಮಳೆ ಇದೆ. ಹಾಗಾಗಿ ಮೇ ತಿಂಗಳಲ್ಲೇ ಎಲ್ಲಾ ಮುಗಿಯುತ್ತೆ. ಜನ ಯೋಚನೆ ಮಾಡಿ ಮತ ಹಾಕಿದ್ರೆ, ಐದು ಪಾಲಿಕೆ ನಾವೇ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
