ಉದಯವಾಹಿನಿ, ಬೇಕಾಗುವ ಸಾಮಗ್ರಿಗಳು:ಅಕ್ಕಿ: 1 ಕಪ್
ಹೆಸರು ಬೇಳೆ: 1/2 ಕಪ್
ಬೆಲ್ಲ (ಪುಡಿ ಮಾಡಿದ್ದು): 1.5 ರಿಂದ 2 ಕಪ್
ತುಪ್ಪ: 4-5 ಟೇಬಲ್‌ ಚಮಚ
ಗೇರುಬೀಜ ಮತ್ತು ಒಣದ್ರಾಕ್ಷಿ: ಸ್ವಲ್ಪ
ಏಲಕ್ಕಿ ಪುಡಿ: 1/2 ಟೀಚಮಚ
ಲವಂಗ: 2
ನೀರು: 4 ಕಪ್
ಹಾಲು: 1/2 ಕಪ್
ತಯಾರಿಸುವ ವಿಧಾನ:
ಮೊದಲು ಒಂದು ಪ್ಯಾನ್‌ನಲ್ಲಿ ಹೆಸರು ಬೇಳೆಯನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಾಗುವವರೆಗೆ (ಘಮ ಬರುವವರೆಗೆ) ಹುರಿದುಕೊಳ್ಳಿ. ನಂತರ ಅಕ್ಕಿ ಮತ್ತು ಹುರಿದ ಬೇಳೆಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ.
ಕುಕ್ಕರ್‌ನಲ್ಲಿ ತೊಳೆದ ಅಕ್ಕಿ, ಬೇಳೆ ಮತ್ತು 4 ಕಪ್ ನೀರು (ಹಾಗೂ ಸ್ವಲ್ಪ ಹಾಲು) ಸೇರಿಸಿ 3 ರಿಂದ 4 ವಿಸಿಲ್ ಬರುವವರೆಗೆ ಬೇಯಿಸಿ. ಅನ್ನ ಮತ್ತು ಬೇಳೆ ಚೆನ್ನಾಗಿ ಮೆತ್ತಗಾಗಿರಲಿ.
ಮತ್ತೊಂದು ಪಾತ್ರೆಯಲ್ಲಿ ಪುಡಿ ಮಾಡಿದ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಬಿಸಿ ಮಾಡಿ. ಬೆಲ್ಲ ಕರಗಿದ ನಂತರ ಅದನ್ನು ಸೋಸಿಕೊಳ್ಳಿ. ಈ ಬೆಲ್ಲದ ನೀರನ್ನು ಬೇಯಿಸಿದ ಅನ್ನದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕೈಡಿಸಿ. ಬೆಲ್ಲದ ಪಾಕ ಮತ್ತು ಅನ್ನದ ಮಿಶ್ರಣ ಒಂದಕ್ಕೊಂದು ಬೆರೆಯುವಂತೆ 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. ಈ ಹಂತದಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿ.
ಒಂದು ಸಣ್ಣ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಲವಂಗ, ಗೇರುಬೀಜ ಮತ್ತು ಒಣದ್ರಾಕ್ಷಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ಇದನ್ನು ಸಿದ್ಧವಾಗಿರುವ ಪೊಂಗಲ್‌ಗೆ ಸೇರಿಸಿ ಚೆನ್ನಾಗಿ ಬೆರೆಸಿ.

Leave a Reply

Your email address will not be published. Required fields are marked *

error: Content is protected !!