ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಯುದ್ಧನೌಕೆಗಳು, ವಿಮಾನಗಳು ಮತ್ತು ಈ ದೇಶದ ಇತರ ಆಸ್ತಿಗಳ ಮೇಲೆ ದಾಳಿ ಮಾಡುವ ಸಂಬಂಧ ಮಾಹಿತಿಯನ್ನು ಇರಾನ್​ಗೆ ರಷ್ಯಾ ಒದಗಿಸಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆಯ ಜೊತೆ ನಿಕಟ ಸಂಪರ್ಕ ಇರುವ ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಸೂಕ್ಷ್ಮ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ಅಧಿಕಾರವಿಲ್ಲದ ಈ ಅಧಿಕಾರಿಗಳು ಅನಾಮಧೇಯವಾಗಿ ಈ ಕುರಿತು ಮಾತನಾಡಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ತಮ್ಮ ಬಾಂಬ್ ದಾಳಿಯನ್ನು ಮುಂದುವರೆಸಿದರೆ ಮತ್ತು ಇರಾನ್ ಪರ್ಷಿಯನ್ ಕೊಲ್ಲಿಯಲ್ಲಿರುವ ಅಮೆರಿಕದ ಆಸ್ತಿಗಳು ಮತ್ತು ಮಿತ್ರರಾಷ್ಟ್ರಗಳ ಮೇಲೆ ಪ್ರತೀಕಾರದ ದಾಳಿ ನಡೆಸುತ್ತಿರುವಾಗ, ಈ ಮಾಹಿತಿಗಳ ಜೊತೆಗೆ ಏನು ಮಾಡಬೇಕೆಂದು ಇರಾನ್‌ಗೆ ರಷ್ಯಾ ನಿರ್ದೇಶಿಸುತ್ತಿದೆ ಎಂಬುದರ ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆ ಬಹಿರಂಗಪಡಿಸಿಲ್ಲ ಎಂದು ಈ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಆದರೂ, ಒಂದು ವಾರದ ಹಿಂದೆ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಆರಂಭಿಸಿದ ಯುದ್ಧದಲ್ಲಿ ರಷ್ಯಾ ಭಾಗಿಯಾಗಲು ಪ್ರಯತ್ನಿಸುತ್ತಿರುವುದಕ್ಕೆ ಇದು ಮೊದಲ ಸೂಚನೆಯಾಗಿದೆ. ತನ್ನ ಪರಮಾಣು ಕಾರ್ಯಕ್ರಮ ಮತ್ತು ಹಿಜ್ಬೊಲ್ಲಾ, ಹಮಾಸ್ ಮತ್ತು ಹೌತಿಗಳು ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ವಿನಾಶವನ್ನುಂಟು ಮಾಡಿದ ಪ್ರಾಕ್ಸಿ ಗುಂಪುಗಳಿಗೆ ಬೆಂಬಲ ನೀಡಿದ್ದರಿಂದ ವರ್ಷಗಳ ಕಾಲ ಒಂಟಿತನವನ್ನು ಎದುರಿಸಿರುವ ಇರಾನ್​ ಜೊತೆಗೆ ಸ್ನೇಹ ಸಂಬಂಧ ಕಾಯ್ದುಕೊಳ್ಳುವ ಅಪರೂಪದ ದೇಶಗಳ ಕ್ಲಬ್‌ನಲ್ಲಿ ರಷ್ಯಾ ಕೂಡ ಇದೆ.

ಅಮೆರಿಕದ ಗುರಿಗಳ ಕುರಿತು ಇರಾನ್‌ ಜೊತೆಗೆ ಗುಪ್ತಚರ ಮಾಹಿತಿಯನ್ನು ರಷ್ಯಾ ಹಂಚಿಕೊಳ್ಳುತ್ತಿದೆ ಎಂಬ ವರದಿಗಳನ್ನು ಶ್ವೇತಭವನ ನಗಣ್ಯ ಮಾಡಿದೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಶುಕ್ರವಾರ ಸುದ್ದಿಗಾರರಿಗೆ “ಇರಾನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಇದು ಯಾವುದೇ ವ್ಯತ್ಯಾಸವನ್ನುಂಟು ಮಾಡಲ್ಲ ಎನ್ನುವುದು ಸ್ಪಷ್ಟವಾಗಿದೆ. ಏಕೆಂದರೆ ನಾವು ಅವರನ್ನು ಸಂಪೂರ್ಣವಾಗಿ ನಾಶಮಾಡುತ್ತಿದ್ದೇವೆ” ಎಂದು ಹೇಳಿದರು.

ಶುಕ್ರವಾರ ಸಿಬಿಎಸ್‌ನ “60 ಮಿನ್ಯುಟ್ಸ್​” ಸಂದರ್ಶನದಲ್ಲಿ, ರಷ್ಯಾ ಇರಾನ್‌ಗೆ ಸಹಾಯ ಮಾಡುತ್ತಿದೆ ಎಂಬ ವರದಿಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಅಮೆರಿಕವು ಎಲ್ಲವನ್ನೂ ಟ್ರ್ಯಾಕ್ ಮಾಡುತ್ತಿದೆ ಮತ್ತು ಅದನ್ನು ಯುದ್ಧದ ಪ್ಲ್ಯಾನ್​ಗಳಲ್ಲಿ ಸೇರಿಸುತ್ತಿದೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದರು.

 

Leave a Reply

Your email address will not be published. Required fields are marked *

error: Content is protected !!