ಉದಯವಾಹಿನಿ, ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಮುಂದುವರೆದಿದೆ. ಸುಮಾರು ಒಂದು ವಾರದಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಇರಾನ್ ದೇಶಕ್ಕೆ ಭಾರೀ ಹಾನಿಯಾಗಿದೆ. ಇದೇ ವೇಳೆ ಅಮೆರಿಕ ಮತ್ತು ಇಸ್ರೇಲ್ ಕೂಡ ಭಾರೀ ನಷ್ಟವನ್ನು ಅನುಭವಿಸಿವೆ. ಇದೆ ವೇಳೆ ಈಗ ಇರಾನ್ ಬೆಂಬಲಕ್ಕೆ ಚೀನಾ ಧಾವಿಸಿದೆ.ಯುದ್ಧದ ಆರಂಭದಿಂದಲೂ ಇಸ್ರೇಲ್ ಹಾಗೂ ಅಮೇರಿಕಾದ ನಡೆಯನ್ನು ಚೀನಾ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ.ಆದರೆ ಮೂಲಗಳ ಪ್ರಕಾರ ಚೀನಾದ ಬೆಂಬಲ ಸಂಪೂರ್ಣವಾಗಿಲ್ಲ, ಅದರ ಬೆಂಬಲದ ಹಿಂದೆ ಚೀನಾದ ಕೆಲವು ಹಿತಾಸಕ್ತಿಗಳಿವೆ ಅದರಲ್ಲೂ ಮುಖ್ಯವಾಗಿ ಆರ್ಥಿಕ ಹಿತಾಸಕ್ತಿಗಳಿವೆ ಎನ್ನಲಾಗಿದೆ, ಚೀನಾ ವಿಶ್ವ ಅತಿ ದೊಡ್ಡ ಆರ್ಥಿಕತೆಯಾಗಿದೆ. ತನ್ನ ಎಲ್ಲಾ ಸರಕುಗಳನ್ನು ಚೀನಾ ಮಧ್ಯಪ್ರಾಚ್ಯ, ಏಷ್ಯಾ ಮತ್ತು ಯುರೋಪ್ ದೇಶಗಳಿಗೆ ಎಲ್ಲಾ ರೀತಿಯ ಸರಕುಗಳನ್ನು ರಫ್ತು ಮಾಡುತ್ತದೆ. ಅಷ್ಟೇ ಅಲ್ಲದೇ ಇರಾನ್ ಕೂಡ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಏಕೆಂದರೆ ಚೀನಾ ದೇಶಕ್ಕೆ ಗಮನಾರ್ಹ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಪೂರೈಸುತ್ತದೆ.ಹಾಗಾಗಿ ಚೀನಾ ಮತ್ತು ಇರಾನ್ ನಡುವೆ ಯಾವುದೇ ಸಂಘರ್ಷ ಉಂಟಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published. Required fields are marked *

error: Content is protected !!