ಉದಯವಾಹಿನಿ, ಬ್ರೆಡ್ ಸ್ಟೈಸ್‌ಗಳು: 4-5
ಬೆಣ್ಣೆ: 3 ದೊಡ್ಡ ಚಮಚ
ಬೆಳ್ಳುಳ್ಳಿ: 1 ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಚಿಲ್ಲಿ ಪ್ಲೇಕ್ಸ್: ಅರ್ಧ ಚಮಚ
ಒರೆಗಾನೊ: ಅರ್ಧ ಚಮಚ
ಚೀಸ್: ತುರಿದಿದ್ದು
ತಯಾರಿಸುವ ಸರಳ ವಿಧಾನ:
ಒಂದು ಸಣ್ಣ ಬಟ್ಟಲಿನಲ್ಲಿ ಮೃದುವಾದ ಬೆಣ್ಣೆಯನ್ನು ತೆಗೆದುಕೊಳ್ಳಿ. ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಚಿಲ್ಲಿ ಪ್ಲೇಕ್ಸ್ ಮತ್ತು ಒರೆಗಾನೊ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಬ್ರೆಡ್ ಸ್ಟೈಸ್‌ಗಳ ಒಂದು ಬದಿಗೆ ಸಮನಾಗಿ ಹಚ್ಚಿ. ನಿಮಗೆ ಚೀಸ್ ಇಷ್ಟವಿದ್ದರೆ, ಅದರ ಮೇಲೆ ಸ್ವಲ್ಪ ತುರಿದ ಚೀಸ್ ಅನ್ನು ಉದುರಿಸಿ.
ಒಂದು ತವಾ ಅಥವಾ ಪ್ಯಾನ್ ಅನ್ನು ಬಿಸಿ ಮಾಡಿ. ಬೆಣ್ಣೆ ಹಚ್ಚಿದ ಬದಿ ಕೆಳಗಿರುವಂತೆ ಬ್ರೆಡ್ ಇರಿಸಿ. ಸಣ್ಣ ಉರಿಯಲ್ಲಿ ಬ್ರೆಡ್ ಗೋಲ್ಡನ್ ಬ್ರೌನ್ ಆಗುವವರೆಗೆ ಮತ್ತು ಚೀಸ್ ಕರಗುವವರೆಗೆ ಬೇಯಿಸಿ.
ಬ್ರೆಡ್ ಗರಿಗರಿಯಾದ ನಂತರ, ಅದನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿ. ಈಗ ನಿಮ್ಮ ನೆಚ್ಚಿನ ಟೊಮೆಟೊ ಕೆಚಪ್ ಅಥವಾ ಸಾಸ್ ಜೊತೆಗೆ ಸವಿಯಲು ಗಾರ್ಲಿಕ್ ಬ್ರೆಡ್ ಸಿದ್ಧ!
