ಉದಯವಾಹಿನಿ,ಕಾರಟಗಿ. ಈ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳುಒಂದಿಲ್ಲೋ0ದುಕ್ಷೇತ್ರದಲ್ಲಿ ಸಾಧಕರಾಗಿ ಹೊರಹೊಮ್ಮುತ್ತಿರುವುದು ಸಂಸ್ಥೆಯ ಆಡಳಿತ ಮಂಡಳಿಗೆ, ಹೆತ್ತವರಿಗೆ ಆ ಮೂಲಕ ನಗರದ ಜನತೆ ಹೆಮ್ಮೆಪಡುವ ವಿಷಯವಾಗಿದೆ ಎಂದು ಶ್ರೀ ಶರಣಬಸವೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ.ಎಸ್‌ಬಿ ಶೆಟ್ಟರ್ ಹೇಳಿದರು.
ಪಟ್ಟಣದ ಶ್ರೀ ಶರಣಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಭೂದಾನಿಗಳಿಗೆ ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು.
ಪ್ರತಿಯೊಬ್ಬರು ವೈಯುಕ್ತಿಕ ಸಾಧನೆ ಮಾಡುವತ್ತ ಗಮನ ಹರಿಸಬೇಕು. ಜೀವನದಲ್ಲಿ ಉತ್ತಮ ಮೌಲ್ಯ, ನೈತಿಕತೆ, ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಇವುಗಳೇ ಯಶಸ್ಸಿನ ಮೂಲ.ನಿರಂತರ ಅಭ್ಯಾಸ, ಕಠಿಣ ಪರಿಶ್ರಮದಿಂದ ಅಸಾಧ್ಯವಾದುದನ್ನು ಸಾಧಿಸಬಹುದು. ಅಂತಹ ಮಕ್ಕಳು ಮಾತ್ರವೇ ಜೀವನದಲ್ಲಿ ಸಾಧಕರಾಗಿ ಸಮಾಜ ಗುರುತಿಸುವಂತವರಾಗುತ್ತಾರೆ.
ಮಕ್ಕಳು ಪೋಷಕರ ಆಶಯ ಈಡೇರಿಕೆಗೆ ವಿದ್ಯಾರ್ಥಿದೆಸೆಯಲ್ಲಿಯೇ ಅಪಾರವಾಗಿ ಶ್ರಮಿಸಬೇಕಾಗಿದೆ. ಚಾರ್ಟಡ್ ಅಕೌಂಟ0ಟ್‌ನ0ತಹ ಪ್ರತಿಷ್ಠಿತ, ಕಠಿಣ ಪರೀಕ್ಷೆಗಳಲ್ಲಿ ನಮ್ಮ ವಿದ್ಯಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿರುವುದು ಜೊತೆಗೆ ಈ ಬಾರಿ ಪಿಯು ಫಲಿತಾಂಶದಲ್ಲಿ ವಾಣಿಜ್ಯ ಶಾಸ್ತçದಲ್ಲಿ ರಾಜ್ಯಕ್ಕೆ ಏಳನೇ ರ‍್ಯಾಂಕ್ ಪಡೆದಿರುವುದು ಶ್ಲಾಘನೀಯ ಕಾರ್ಯವಾಗಿದೆ.
ನಂತರ ಸನ್ಮಾನಿತರ ಪರವಾಗಿ ಉದ್ಯಮಿ ಕೆ.ಸಣ್ಣಸೂಗಪ್ಪ, ವಿದ್ಯಾರ್ಥಿಗಳಾದ ಶಿವಪ್ರಸಾದಗೌಡ ಹಾಗೂ ಅಮನ್‌ರಾಜ್ ಅರಳಿ ಮಾತನಾಡಿದರು.
ಇದೇಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ನಿರ್ಧೇಶಕರು ಸೇರಿದಂತೆ ಗಣ್ಯರು ಭೂದಾನಿಗಳಾದ ಕೆ.ಸಣ್ಣ ಸೂಗಪ್ಪ, ಸಿಎ ಪಾಸಾದ ವಿದ್ಯಾರ್ಥಿಗಳಾದ ಶಿವಪ್ರಸಾದಗೌಡ, ಸಂತೋಷಕುಮಾರ್ ಸಜ್ಜಿಹೊಲ, ಪಿಯು ಕಾಮರ್ಸ್ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಅಮನ್‌ರಾಜ್ ರವಿರಾಜ್ ಅರಳಿ ಸೇರಿದಂತೆ ತಂದೆತಾಯAದಿರಿಗೆ ಸನ್ಮಾನಿಸಿ ಗೌರವಿಸಿದರು. ಮುಖ್ಯೋಪಾದ್ಯಾಯ ಅಮರೇಶ್ ಪಾಟೀಲ್, ಶಿಕ್ಷಕ ಜಗದೀಶ್ ಭಜಂತ್ರಿ, ಶಿಕ್ಷಕಿ ಸುವರ್ಣ ಬೂದಗುಂಪಾ ಕಾರ್ಯಕ್ರಮ ನಿರ್ವಹಿಸಿದರು.
