ಉದಯವಾಹಿನಿ, ನಿಂಬೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಆಂಟಿ- ಆಕ್ಸಿಡೆಂಟ್ ಗುಣಗಳೂ ಇವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂಬೆ ನೀರಿನ ಅನೇಕ ಪ್ರಯೋಜನಗಳನ್ನು ಹೇಳಲಾಗುತ್ತಿದ್ದು, ನಿಯಮಿತವಾಗಿ ನಿಂಬೆ ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಪದಾರ್ಥಗಳು ಸುಲಭವಾಗಿ ಹೊರಹೋಗುತ್ತವೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದು ಎಷ್ಟು ಸತ್ಯ, ನಿಂಬೆ ನೀರು ನಿಜವಾಗಿಯೂ ಪರಿಣಾಮಕಾರಿ ಔಷಧಿಯೇ, ದೇಹ ನಿಜವಾಗಿಯೂ ಡಿಟಾಕ್ಸ್ ಆಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಕುರಿತು ಆಯುರ್ವೇದ ತಜ್ಞರು ನೀಡಿದ ಮಾಹಿತಿ ಈ ಸ್ಟೋರಿಯಲ್ಲಿದೆ.
ದೆಹಲಿ ಮೂಲದ ಆಯುರ್ವೇದ ತಜ್ಞೆ ಡಾ. ಚಂಚಲ್ ಶರ್ಮಾ ಹೇಳುವ ಪ್ರಕಾರ, ಈ ರೀತಿಯ ಉಪಾಯ ಎಲ್ಲರಿಗೂ ಸಮಾನವಾಗಿ ಪ್ರಯೋಜನಕಾರಿಯಾಗುವುದಿಲ್ಲ. ಪ್ರತಿಯೊಬ್ಬರ ದೇಹದ ಸ್ವಭಾವ ಮತ್ತು ಕಾರ್ಯಪದ್ಧತಿ ವಿಭಿನ್ನವಾಗಿರುತ್ತದೆ. ನಮ್ಮ ದೇಹದಲ್ಲಿರುವ ಕಿಡ್ನಿ, ಯಕೃತ್ತು (ಲಿವರ್) ಮತ್ತು ಜೀರ್ಣಾಂಗ ವ್ಯವಸ್ಥೆಗಳು ಸ್ವಾಭಾವಿಕವಾಗಿಯೇ ದೇಹದಲ್ಲಿನ ಕಸದ ಪದಾರ್ಥಗಳನ್ನು ಹೊರಹಾಕುವ ಕೆಲಸ ಮಾಡುತ್ತವೆ. ನಿಂಬೆ ನೀರು ಈ ಪ್ರಕ್ರಿಯೆಗೆ ಸಹಾಯ ಮಾಡಬಹುದು, ಆದರೆ ಇದರಿಂದ ದೇಹ ಸಂಪೂರ್ಣವಾಗಿ ಡಿಟಾಕ್ಸ್ ಆಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!