ಉದಯವಾಹಿನಿ, ಬೆಂಗಳೂರು: ಅಬಕಾರಿ ಇಲಾಖೆಯ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣವನ್ನ ಆಂತರಿಕ ತನಿಖೆಗೆ ಅಬಕಾರಿ ಸಚಿವರು ಸೂಚಿಸಿದ್ದಾರೆ. ಅಬಕಾರಿ ಇಲಾಖೆಯ ವೆಂಕಟೇಶ್ ಆಂತರಿಕ ತನಿಖೆಗೆ ಸೂಚಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ವಿಪಕ್ಷಗಳು ಅಬಕಾರಿ ಸಚಿವರ ಮೇಲೆ ಮುಗಿಬೀಳುತ್ತಿರುವ ಹಿನ್ನೆಲೆ ಆಂತರಿಕ ತನಿಖೆಗೆ ಸೂಚಿಸಿದ್ದು, ಆಂತರಿಕ ತನಿಖೆ ಮಾಡಿ ಸಚಿವರಿಗೆ ವರದಿ ಸಲ್ಲಿಕೆ ಮಾಡಲಿದ್ದಾರೆ. ಪರವಾನಗಿಯನ್ನ ಆನ್‌ಲೈನಲ್ಲಿ ಅಪ್ಲೈ ಮಾಡೋದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾರನ್ನು ಭೇಟಿ ಮಾಡುವ ಅಗತ್ಯ ಇಲ್ಲ ಅಂತಾ ಅಬಕಾರಿ ಇಲಾಖೆಯ ವಾದ.
ಹಾಗಾಗಿ ಲೋಕಾಯುಕ್ತ ದಾಳಿ ಪ್ರಕರಣದ ದಾಳಿ ಬಳಿಕ ಸಂಪೂರ್ಣ ಮಾಹಿತಿ ಪಡೆಯಲು ಆಂತರಿಕ ತನಿಖೆ ಮಾಡುತ್ತಿದ್ದಾರೆ. ಇನ್ನೂ ಲೋಕಾಯುಕ್ತದಿಂದ ಅಬಕಾರಿ ಇಲಾಖೆಗೆ ರಿಪೋರ್ಟ್ ಬಂದ ಬಳಿಕ ಅಧಿಕಾರಿಯ ಅಮಾನತ್ತಿನ ಬಗ್ಗೆ ಚಿಂತಿಸಲಾಗಿದೆ. ಅಧಿಕಾರಿ ಅರೆಸ್ಟ್ ಆಗಿರುವ ಹಿನ್ನೆಲೆ ಅಮಾನತ್ತು ಮಾಡೋದಕ್ಕೆ ಕಮೀಷನರ್ ಮುಂದಾಗುತ್ತಿದ್ದಾರೆ. ಈಗಾಗಲೇ ಆಂತರಿಕ ತನಿಖೆಯನ್ನ ಮಾಡುತ್ತಿದ್ದು, ಏನೆಲ್ಲಾ ಅಕ್ರಮಗಳು ಆಗುತ್ತಿದೆ? ಹೇಗಾಯ್ತು ಅಂತಾ ಪತ್ತೆ ಹಚ್ಚಲಿದ್ದಾರೆ.
