ಉದಯವಾಹಿನಿ, ಇಂಡೋನೇಷ್ಯಾ: ಯೋಗಕರ್ತದಿಂದ ಸುಲವೇಸಿ ದ್ವೀಪದ ಮಕಾಸ್ಸರ್ ನಗರಕ್ಕೆ ತೆರಳುತ್ತಿದ್ದ ಇಂಡೋನೇಷ್ಯಾ ವಾಯು ಸಾರಿಗೆ ಟರ್ಬೊಪ್ರೊಪ್ ವಿಮಾನವು ನಾಪತ್ತೆಯಾಗಿದೆ. ವಿಮಾನದ ಸಂಪರ್ಕ ಕಳೆದುಹೋಗಿದ್ದು, ಈ ವಿಮಾನದಲ್ಲಿ ಇಂಡೋನೇಷ್ಯಾದ ಮೂವರು ಅಧಿಕಾರಿಗಳು ಮತ್ತು ಏಳು ಮಂದಿ ಸಿಬ್ಬಂದಿ ಇದ್ದರು. ಈ ವಿಮಾನಕ್ಕಾಗಿ ಹುಡುಕಾಟ ಕಾರ್ಯ ನಡೆಸಲಾಗುತ್ತಿದೆ. ಮಧ್ಯಾಹ್ನ 1 ಗಂಟೆಯ ಅನಂತರ ಮಾನದೊಂದಿಗಿನ ಸಂಪರ್ಕ ಕಡಿತಗೊಂಡಿತು ಎಂದು ವಾಯು ಸಾರಿಗೆ ಇಲಾಖೆಯ ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಶಕ್ತಿ ವಹ್ಯು ಟ್ರೆಂಗೊನೊ, ಇಂಡೋನೇಷ್ಯಾ ವಾಯು ಸಾರಿಗೆ ಟರ್ಬೊಪ್ರೊಪ್ ವಿಮಾನವು ಶನಿವಾರ ಮಧ್ಯಾಹ್ನ 1 ಗಂಟೆಯ ಅನಂತರ ನಾಪತ್ತೆಯಾಗಿದೆ. ಈ ವಿಮಾನವು ಯೋಗಕರ್ತದಿಂದ ಸುಲವೇಸಿ ದ್ವೀಪದ ಮಕಾಸ್ಸರ್ ನಗರಕ್ಕೆ ತೆರಳುತ್ತಿತ್ತು. ಸಮುದ್ರ ವ್ಯವಹಾರ ಮತ್ತು ಮೀನುಗಾರಿಕೆ ಸಚಿವಾಲಯದ ಮೂವರು ಉದ್ಯೋಗಿಗಳು ಇದರಲ್ಲಿದ್ದು, ಈ ಪ್ರದೇಶದಲ್ಲಿನ ಸಂಪನ್ಮೂಲಗಳ ವೈಮಾನಿಕ ಮೇಲ್ವಿಚಾರಣೆ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ. ಏಳು ಸಿಬ್ಬಂದಿ ಸದಸ್ಯರು ಸಹ ವಿಮಾನದಲ್ಲಿದ್ದರು. ವಿಮಾನ ಶೋಧ ಕಾರ್ಯಕ್ಕಾಗಿ ಸ್ಥಳೀಯ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಆರಿಫ್ ಅನ್ವರ್ ನೇತೃತ್ವದಲ್ಲಿ ಎಎಫ್ ಪಿ ತಂಡಗಳನ್ನು ರಚಿಸಲಾಗಿದೆ. ವಿಮಾನ ಕೊನೆಯದಾಗಿ ಸಂದೇಶ ಕಳುಹಿಸಿರುವ ಸ್ಥಳ ಮಕಾಸ್ಸರ್‌ನ ಗಡಿಯಲ್ಲಿರುವ ಮಾರೋಸ್ ರೀಜೆನ್ಸಿಯ ಪರ್ವತ ಪ್ರದೇಶವಾಗಿದ್ದು, ಇಲ್ಲಿ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು.
