ಉದಯವಾಹಿನಿ ಕೆಂಭಾವಿ: ಈ ಬಾರಿ ಶ್ರಾವಣ ಮಾಸಕ್ಕೆ ಅಧಿಕ (ಹೆಚ್ಚಿನ) ತಿಂಗಳು ಬಂದಿದ್ದು ವೇದ ಪುರಾಣಗಳ ಪ್ರಕಾರ ಅಧಿಕ ಮಾಸ ಅತೀ ಮಹತ್ವ ಪಡೆದುಕೊಂಡಿದೆ ಎಂದು ಅರ್ಚಕ ಆನಂದ ಕುಲಕರ್ಣಿ ಹೇಳಿದರು. ಪಟ್ಟಣದ ಸಂಜೀವನಗರದ ಸಂಜೀವಾ0ಜನೇಯ ದೇವಸ್ಥಾನದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಅಧಿಕ ಶ್ರಾವಣದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಪ್ರತಿಯೊಬ್ಬ ಹಿಂದೂಗಳ ಪವಿತ್ರ ಮಾಸವಾಗಿದೆ. ಶ್ರಾವಣದಲ್ಲಿ ನಮ್ಮನ್ನು ಭಕ್ತಿ ಮಾರ್ಗಕ್ಕೆ ಕೊಂಡೊಯ್ಯುವ ಭಗವಂತನಲ್ಲಿ ಅನಣ್ಯ ಭಕ್ತಿ ಮಾಡುವ ಸದ್ವಿಚಾರಗಳನ್ನು ತಿಳಿಸುವುದೆ ಶ್ರಾವಣ. ಇಂಥಾ ಶ್ರಾವಣ ಈ ಬಾರಿ ಎರಡು ತಿಂಗಳವರೆಗೆ ಬಂದಿದ್ದು ಅಧಿಕ ಮತ್ತು ನಿಜ ಶ್ರಾವಣ ಎಂದು ಕರೆಯಲ್ಪಡುವ ಶ್ರಾವಣ ತಿಂಗಳಲ್ಲಿ ಆಸ್ತಿಕ ಜನತೆ ವಿಶೇಷವಾಗಿ ಭಗವಂತನ ಕುರಿತಾದ ಅನೇಕ ವಿಚಾರಗಳನ್ನು ತಿಳಿದು ಸುಸಂಕೃತ ವ್ಯಕ್ತಗಲಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಕರೆ ನೀಡಿದರು. ನಂತರ ಸಂಜೀವಾAಜನೆಯ ಮತ್ತು ಕಾಶಿ ವಿಶ್ವನಾಥ ದೇವರಿಗೆ ವಿಶೇಷ ಕರಿಗಡುಬು ಅರ್ಪಣೆ, ಅಭಿಷೇಕ, ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕರಮಗಳು ಜರುಗಿದವು. ನಂತರ ನೆರೆದಿದ್ದ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.
ಉದಯಕುಮಾರ ಕುಲಕರ್ಣಿ, ಶಿವಣ್ಣ ಬಳಬಟ್ಟಿ, ರಾಮಗೌಡ ಅಸಂತಾಪೂರ, ಶರಣಪ್ಪ ಬೈಚಬಾಳ, ಪ್ರಭು ನಂದೆಳ್ಳಿ, ಹಣಮಂತ್ರಾಯ ಪೂಜಾರಿ, ಸಿದ್ದಣ್ಣ ಕಾಚಾಪೂರ, ಮಲ್ಲಪ್ಪ ಕದ್ನೆಳ್ಳಿ, ರವಿ ತೆಲಗಿ, ಸಿದ್ದಪ್ಪ ದೇವಿಕೇರಿ, ಮಲಕಣ್ಣ ದುಮ್ಮದ್ರಿ, ಸಾಹೇಬಗೌಡ ಮುದನೂರ ಇದ್ದರು.

Leave a Reply

Your email address will not be published. Required fields are marked *

error: Content is protected !!