ಉದಯವಾಹಿನಿ ಮುದಗಲ್ಲ: ಐತಿಹಾಸಿಕ ಮುದಗಲ್ ಮೊಹರಂ ಹಬ್ಬಕ್ಕೆ  ಬರುವ ಮಹಿಳೆಯರು ಬಹಿರ್ದೆಸೆಗೆ ಹೋಗ ಬೇಕಾದರೆ ತುಂಬಾ ತೊಂದರೆ ಅನುಭವಿಸುತ್ತಾರೆ ಆದಕಾರಣ 10 ರಿಂದ 15 ಸಂಚಾರಿ ಶೌಚಾಲಯ ಗಳನ್ನು ನಿರ್ಮಿಸ ಬೇಕು ಹಾಗು ಪಟ್ಟಣದಲ್ಲಿ ಎಂಟ್ಹತ್ತು ದಿವಸಕ್ಕೆ ಒಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು ಇದರಿಂದ ಪ್ರತಿಯೊಂದು ಮನೆಯಲ್ಲಿ ಹಬ್ಬಕ್ಕೆ ನೆಂಟರು ಬರುವುದ ರಿಂದ ಬಳಕೆಗೆ ನೀರು ಸಾಲದೆ ತುಂಬಾ ತೊಂದರೆ ಆಗುತ್ತಿದ್ದು ಪ್ರತಿ ವಾರ್ಡಗಳಿಗೆ ಟ್ಯಾಂಕರ್ ಮೂಲಕ ಪ್ರತಿ ನಿತ್ಯ ಕುಡಿ ಯುವ ನೀರು ಸರಬರಾಜು ಮಾಡ ಬೇಕು.  ಮತ್ತು ಪಟ್ಟಣದಲ್ಲಿ  ವಿದ್ಯುತ್ ದೀಪಗಳ ಅಲಂಕಾರ ಮಾಡಬೇಕು. ಹಾಗು ಜಾತ್ರೆಯಲ್ಲಿ ಹಾಕಿರುವ ಅಂಗಡಿಕಾರ ರಿಂದ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡದಂತೆ ನೋಡಿ ಕೊಳ್ಳ ಬೇಕು ಎಂದು ಕರ್ನಾಟಕ  ರಕ್ಷಣಾ ವೇದಿಕೆ ಲಿಂಗಸುಗೂರು  ತಾಲೂಕು ಅಧ್ಯಕ್ಷ ಜಿಲಾನಿ ಪಾಶಾ ಹಾಗು ಮುದಗಲ್ ಘಟಕದ ಅಧ್ಯಕ್ಷ ಎಸ್.ಎ.ನಯೀಮ್ ಅವರ ನೇತೃತ್ವದಲ್ಲಿ  ಉಪ ತಹಶಿಲ್ದಾರರ ಮುಖಾಂತರ ಲಿಂಗಸುಗೂರು ಸಹಾಯಕ ಆಯುಕ್ತರಿಗೆ ಹಾಗು ಪುರಸಭೆ ಮುಖ್ಯಾಧಿಕಾರಿ ನಬೀ ಕಂದಗಲ್ ಅವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಸಾಬು ಹುಸೇನ್, ಮಹಾಂತೇಶ ಚೆಟ್ಟರ, ರಹೆಮಾನ ದೂಲಾ, ಭೀಮಣ್ಣ ಉಪ್ಪಾರ, ಜಮಾಲಿ ಸಾಬ, ಅಬ್ದುಲ್ ಮಜೀದ್, ಹನೀಫ್ ಖಾನ, ಅವೇಸ ಪಾಶಾ, ಹನುಮಂತ ನಾಯಕ, ಅಜೀಜ್ ಪಾಶಾ, ಖಲಂದರ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!