ಉದಯವಾಹಿನಿ,: ಹೋಟೆಲ್‌ನಲ್ಲಿ ಹೇಗೆ ಮಾಡುತ್ತಾರೆ ಆ ರೀತಿ ಮನೆಯಲ್ಲಿ ಅನ್ನ ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಷ್ಟು ಬಾರಿ ಅನ್ನ ಮಾಡಿದರೂ ಪಾತ್ರೆಗೆ ಅಥವಾ ಕುಕ್ಕರ್‌ಗೆ ಅಂಟಿಕೊಳ್ಳುತ್ತಿರುತ್ತದೆ. ಇದರಿಂದ ಪಾತ್ರೆ ತೊಳೆಯುವಾಗಲು ಸಮಸ್ಯೆ ಆಗುತ್ತಿರುತ್ತದೆ. ಹೀಗೆ ಆಗಬಾರದು ಎಂದರೆ ಅನ್ನ ಮಾಡುವಾಗ ಈ ಪದಾರ್ಥವನ್ನು ಸೇರಿಸಿದರೆ ಸಾಕು ನಿತ್ಯ ನಿಮಗೆ ಸಮಸ್ಯೆವೇ ಇರುವುದಿಲ್ಲ.
ಪಾತ್ರೆ ಅಥವಾ ಕುಕ್ಕರ್‌ನಲ್ಲಿ ಅನ್ನ ಬೇಯಿಸಬೇಕಾದರೆ ಅಂಟಿಕೊಳ್ಳುವುದರಿಂದ ತಿನ್ನುವಾಗ ರೈಸ್ ರುಚಿಯಾಗಿರುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಒಂದು ವೇಳೆ ಅನ್ನ ಚೆನ್ನಾಗಿ ಬೇಯದಿದ್ದರೆ ಅಥವಾ ತುಂಬಾ ಮೃದುವಾದರೆ ತಿನ್ನಲು ಹಿಂದೇಟು ಹಾಕುತ್ತಾರೆ. ಹೋಟೆಲ್‌ಗಳಲ್ಲಿ ಇರುವಂತೆ ಮಾಡಬೇಕು ಎಂದರೆ ಹೀಗೆ ಮಾಡಿ. ಅನ್ನದ ಮೃದುತ್ವ, ಪರಿಮಳ ಇರಬೇಕು ಎಂದರೆ ಈ ಸಲಹೆಯನ್ನು ಪಾಲನೆ ಮಾಡಲೇಬೇಕು. ಈ ಸಲಹೆ ತುಂಬಾ ಸರಳವಾಗಿದೆ. ನೀವು ಅನ್ನ ಮಾಡಬೇಕಾದರೆ ಅರ್ಧ ಚಮಚ ಅಡುಗೆ ಎಣ್ಣೆಯನ್ನು ಸೇರಿಸಬೇಕು. ಇದರಿಂದ ಅನ್ನ ಪಾತ್ರೆಗೆ ಅಂಟಿಕೊಳ್ಳುವುದೇ ಇಲ್ಲ. ಇದರಿಂದ ಅನ್ನ ಚೆನ್ನಾಗಿ ಬೇಯುತ್ತದೆ. ಜೊತೆಗೆ ಅನ್ನ ಸೊಗಸಾಗಿ ಪರಿಮಳಯುಕ್ತವಾಗಿ ಆಗುತ್ತದೆ.
ಅನ್ನ ಮಾಡುವಾಗ ಅರ್ಧ ಚಮಚ ಅಡುಗೆ ಎಣ್ಣೆ ಸೇರಿಸುವುದರಿಂದ ಏನು ಆಗುತ್ತದೆ ಎಂದರೆ, ಎಣ್ಣೆಯೂ ನೀರಿನ ಮೇಲೆ ಪದರವನ್ನು ರೂಪಿಸುತ್ತದೆ. ಕುದಿಯುವಾಗ ಅಕ್ಕಿ ಮೆತ್ತಗೆ ಆಗುವುದನ್ನು ತಡೆಯುತ್ತದೆ. ಹೆಚ್ಚಾಗಿ ಬೇಯುವುದನ್ನು ಅಡುಗೆ ಎಣ್ಣೆ ನಿಯಂತ್ರಿಸುತ್ತದೆ. ಜೊತೆಗೆ ಪ್ರತಿಯೊಂದು ಅಕ್ಕಿ ಕೂಡ ಪ್ರತ್ಯೇಕವಾಗಿ ಇರುವಂತೆ ಮಾಡುತ್ತದೆ. ಕುಕ್ಕರ್‌ನಲ್ಲಿ ಅನ್ನ ಮಾಡುವಾಗ ನೀರು ಹೆಚ್ಚಾಗಿ ಹೊರ ಬಂದು ಅಡುಗೆ ಮನೆಯೆಲ್ಲ ಸಿಡಿಯುತ್ತದೆ. ಇದು ಗ್ಯಾಸ್ ಮತ್ತು ಕುಕ್ಕರನ್ನು ಅದಗೆಡಿಸುತ್ತದೆ. ಅನ್ನ ಮಾಡುವಾಗ ಕುಕ್ಕರ್ ಒಳಗೆ ನೊರೆ ಉಂಟಾಗುವುದರಿಂದ ಹೀಗೆ ಆಗುತ್ತಿರುತ್ತದೆ. ಇದು ಹೀಗೆ ಆಗಬಾರದು ಎಂದರೆ ಅನ್ನ ಬೇಯಿಸುವಾಗ ಅರ್ಧ ಚಮಚದಲ್ಲಿ ಅರ್ಧ ಅಡುಗೆ ಎಣ್ಣೆನ ಹಾಕಿದರೆ ಸಾಕು. ನೀರು ಹೊರ ಬರುವುದನ್ನ ತಡೆಯುತ್ತದೆ.
