ಉದಯವಾಹಿನಿ, ವಾಷಿಂಗ್ಟನ್: ಗ್ರೀನ್‌ಲ್ಯಾಂಡ್ ದ್ವೀಪ ವಶದ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಲೇ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ್ಣು ಇದೀಗ ಹಿಂದೂ ಮಹಾಸಾಗರದಲ್ಲಿರುವ ಪುಟ್ಟ ದ್ವೀಪದ ಡಿಯಾಗೋ ಗಾರ್ಸಿಯೋದ ಮೇಲೆ ಬಿದ್ದಿದೆ.ಈ ಹಿಂದೆ ಆದ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ಇತ್ತೀಚಿನ ಆದೇಶದ ಅನ್ವಯ, ಹಿಂದೂ ಮಹಾಸಾಗರದ ಆಯಕಟ್ಟಿನ ಜಾಗದಲ್ಲಿರುವ ಡಿಯಾಗೋ ಗಾರ್ಸಿಯಾ ದ್ವೀಪವನ್ನು ಮಾರಿಷಸ್‌ಗೆ ಬಿಟ್ಟುಕೊಡಲು ಬ್ರಿಟನ್ ಸರ್ಕಾರ ಮುಂದಾಗಿದೆ. ಆದರೆ ಈ ದ್ವೀಪದಲ್ಲಿ ಅಮೆರಿಕದ ಸೇನಾ ನೆಲೆ ಇರುವ ಕಾರಣ, ಬ್ರಿಟನ್ ನಿರ್ಧಾರಕ್ಕೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಮೇಲೆ ಹಕ್ಕು ಸಾಧನೆಗೆ ಟ್ರಂಪ್ ಮುಂದಾದಲ್ಲಿ ಗ್ರೀನ್‌ಲ್ಯಾಂಡ್ ವಿಷಯದಲ್ಲಿ ಯುರೋಪ್ ದೇಶಗಳ ವೈರತ್ವ ಕಟ್ಟಿಕೊಂಡಂತೆ. ಇಲ್ಲಿ ಭಾರತ ಮತ್ತು ಚೀನಾದ ವಿರೋಧಕ್ಕೂ ತುತ್ತಾಗುವ ಸಾಧ್ಯತೆ ಇದೆ.
ಅಮೆರಿಕದ ಸೇನಾ ನೆಲೆ ಇರುವ ಡಿಯಾಗೋ ಗ್ರಾಸಿಯಾ ದ್ವೀಪವನ್ನು ನಮ್ಮ ನ್ಯಾಟೋ ಸದಸ್ಯ ರಾಷ್ಟ್ರ ಬ್ರಿಟನ್ ಕಾರಣವೇ ಇಲ್ಲದೆ ಮಾರಿಷಸ್‌ಗೆ ಬಿಟ್ಟುಕೊಡಲು ಮುಂದಾಗಿದೆ. ಚೀನಾ ಮತ್ತು ರಷ್ಯಾ ಈ ನಡೆಯನ್ನು ದೌರ್ಬಲ್ಯ ಎಂದು ಪರಿಗಣಿಸಿದೆ. ಅತೀ ಮಹತ್ವದ್ದಾದ ಭೂಮಿಯನ್ನು ವಾಪಸ್ ನೀಡುತ್ತಿರುವುದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೂರ್ಖತನ.
ಇದೇ ಕಾರಣಕ್ಕೆ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕವು ವಶಕ್ಕೆ ಪಡೆಯುವ ಅಗತ್ಯವಿದೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್‌ನಲ್ಲಿ ಹೇಹಿಂದೂ ಮಹಾ ಸಾಗರದಲ್ಲಿ ತನ್ನದೇ ರಕ್ಷಣಾ ಹಿತಾಸಕ್ತಿ ಹೊಂದಿರುವ ಭಾರತ ಬ್ರಿಟನ್ ಸರ್ಕಾರ ದ್ವೀಪವನ್ನು ವಾಪಸ್ ಮಾರಿಷಸ್‌ಗೆ ಒಪ್ಪಿಸಲು ಉತ್ತೇಜನ ನೀಡುತ್ತಲೇ ಬಂದಿದೆ. 1971ರ ಬಾಂಗ್ಲಾ ವಿಮೋಚನಾ ಸಮರ ವೇಳೆ ಅಮೆರಿಕವು ಇಲ್ಲಿ ನಿಯೋಜಿಸಿದ್ದ ಯುದ್ಧನೌಕೆಯು ಭಾರತಕ್ಕೆ ಅಪಾಯ ತಂದೊಡ್ಡಿದ ಹಿನ್ನೆಲೆಯಲ್ಲಿ ಈ ದ್ವೀಪವನ್ನು ವಿದೇಶಿ ಸೇನೆಯಿಂದ ಮುಕ್ತ ಮಾಡಬೇಕೆಂಬುದು ಭಾರತದ ಪ್ರಯತ್ನವಾಗಿದೆ.ಳಿಕೊಂಡಿದ್ದಾರೆ.
