ಉದಯವಾಹಿನಿ, ಇಸ್ಲಾಮಾಬಾದ್: ಕರಾಚಿಯ ಗುಲ್ ಪ್ಲಾಜಾ ಶಾಪಿಂಗ್ ಮಾಲ್‌ನಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಪರಿಶೀಲನೆ ವೇಳೆ ಒಂದೇ ಮಳಿಗೆಯಲ್ಲಿ 30 ಶವಗಳು ಪತ್ತೆಯಾಗಿದ್ದು, ಒಟ್ಟು ಸಾವು 100 ಮೀರಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.ಪಾಕಿಸ್ತಾನದ ʻಮನಿ ಕ್ಯಾಪಿಟಲ್ʼ ಅಂತಲೇ ಫೇಮಸ್ ಆಗಿರುವ ಕರಾಚಿ ಸದರ್ ಪ್ರದೇಶದಲ್ಲಿರುವ ಗುಲ್ ಶಾಪಿಂಗ್ ಮಾಲ್‌ನ ನೆಲಮಾಳಿಗೆಯಲ್ಲಿ ಜ.17 ರಂದು ಬೆಂಕಿ ಕಾಣಿಸಿಕೊಂಡಿತ್ತು.
ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಮಾಲ್‌ಗೆ ವ್ಯಾಪಿಸಿತ್ತು. 1,200 ಮಳಿಗೆಗಳನ್ನು ಹೊಂದಿರುವ ಈ ಬೃಹತ್ ಮಾಲ್‌ನಲ್ಲಿ ಸುಮಾರು 36 ಗಂಟೆಗಳ ಬಳಿಕ ಬೆಂಕಿಯನ್ನ ನಿಯಂತ್ರಣಕ್ಕೆ ತರಲಾಗಿತ್ತು. ಬೆಂಕಿಯನ್ನ ಮುಚ್ಚುವುದಕ್ಕಾಗಿ ಒಳಗಿದ್ದ ಹಲವು ಮಳಿಗೆಗಳ ಶಟ್ಟರ್‌ಗಳನ್ನ ಬಂದ್ ಮಾಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ನಿಯಂತ್ರಣಕ್ಕೆ ಬಂದ ಬಳಿಕ ಪರಿಶೀಲಿಸುವ ವೇಳೆ ʻದುಬೈ ಕ್ರಾಕರಿʼ ಎಂಬ ಒಂದೇ ಮಳಿಗೆಯಲ್ಲಿ ಸುಮಾರು 30 ಶವಗಳು ಪತ್ತೆಯಾಗಿವೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಹಾಗೂ ಮಳಿಗೆಯವರು ಶೆಟ್ಟರ್ ಮುಚ್ಚಿಕೊಂಡಿದ್ದಾರೆ. ಈ ವೇಳೆ ದಟ್ಟ ಹೊಗೆ ತುಂಬಿಕೊಂಡು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಶಂಕಿಸಿದ್ದಾರೆ. ಅಲ್ಲದೇ 10 ರಿಂದ 69 ವರ್ಷ ವಯಸ್ಸಿನ ಮಹಿಳೆಯರು, ಮಕ್ಕಳು ಮತ್ತು ಪುರುಷರು ಸೇರಿದಂತೆ 73 ಕಾಣೆಯಾಗಿದ್ದು, ಅವರ ಪಟ್ಟಿಯನ್ನೂ ಬಿಡುಗಡೆ ಗೊಳಿಸಿದ್ದಾರೆ.
