ಉದಯವಾಹಿನಿ, ಜೀವನದಲ್ಲಿ ಆಸಕ್ತಿ , ಗುರಿ , ಛಲ ಇದ್ದರೆ ಖಂಡಿತ ದಡ ಸೇರಬಹುದು ಎಂಬ ನಂಬಿಕೆಯೊಂದಿಗೆ ಯುವ ಪ್ರತಿಭೆಗಳ ಸೇರಿಕೊಂಡು ʻಅಮೃತ ಅಂಜನ್ʼ ಎಂಬ ಶಾರ್ಟ್ ಫಿಲಂ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಇದೇ ತಂಡ ಅಮೃತ ಅಂಜನ್ ಎನ್ನುವ ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದ ಒಂದು ಮನಮುಟ್ಟುವ ಭಾವನಾತ್ಮಕ ಹಾಡೊಂದು ಬಿಡುಗಡೆ ಮಾಡಲು ಜಿಟಿ ಮಾಲ್‌ನಲ್ಲಿರುವ ಉತ್ಸವ್ ಲಗೇಸಿಯಲ್ಲಿ ಆಯೋಜನೆ ಮಾಡುವುದರ ಜೊತೆಗೆ ಮಾಧ್ಯಮದೊಂದಿಗೆ ಚಿತ್ರದ ಕುರಿತು ಮಾಹಿತಿಯನ್ನ ಹಂಚಿಕೊಳ್ಳಲು ತಂಡ ಸಿದ್ಧತೆ ನಡೆಸಿತು. ಅದೇ ರೀತಿ ಹಾಡು ಬಿಡುಗಡೆ ನಂತರ ಚಿತ್ರತಂಡ ಪತ್ರಿಕಾಗೋಷ್ಠಿಗೆ ಹಾಜರಾದ್ದರು.
ಇನ್ನು ಮೊದಲಿಗೆ ಈ ಚಿತ್ರದ ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಮಾತನಾಡುತ್ತಾ, ನಾನು ಈ ಹಿಂದೆ ಸೋಡಾ ಬುಡ್ಡಿ ಎಂಬ ಚಿತ್ರವನ್ನ ಮಾಡಿದ್ದೆ. ಇದು ನನ್ನ 2ನೇ ಚಿತ್ರ. ಈ ಸಿನಿಮಾ ಆರಂಭಿಸುವುದಕ್ಕೆ ನನ್ನ ಅಮೃತ ಅಂಜನ್ ಕಿರುಚಿತ್ರವೇ ಕಾರಣ. ಈ ಚಿತ್ರದ ಟೈಟಲ್ ವಿಚಾರವಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ವಿ. ಹಾಗಾಗಿ ಅಮೃತ ಅಂಜನ್ ಎಂಬ ಹೆಸರಿನೊಂದಿಗೆ ಚಿತ್ರ ನಿರ್ಮಾಣ ಮಾಡಿದ್ದು, ಇದೊಂದು ಕಂಪ್ಲೀಟ್ ಕಾಮಿಡಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು 80 ಪರ್ಸೆಂಟ್ ಹಾಸ್ಯ, 20 ಪರ್ಸೆಂಟ್ ಸೆಂಟಿಮೆಂಟ್ ಅಂಶಗಳ ಒಳಗೊಂಡಿದ್ದು, ಸಂಪೂರ್ಣ ಮನೋರಂಜನೆ ಈ ಚಿತ್ರ ನೀಡಲಿದೆ. ನಮ್ಮ ಚಿತ್ರದಲ್ಲಿ ಒಟ್ಟು ಎರಡೂವರೆ ಹಾಡು ಇದೆ ಎನ್ನುತ್ತಾ, ಇಂದು ಬಿಡುಗಡೆ ಮಾಡಿರುವ ಭಾವನಾತ್ಮಕ ಹಾಡಿಗೆ ಮುಖ್ಯ ಕಾರಣವೇ ನಮ್ಮ ತಾಯಿ ತಂದೆ. ನಾನು ಬಾಲ್ಯದಲ್ಲಿ ಕಂಡಂತಹ ಒಂದು ಸತ್ಯದ ಅಂಶ. ನಮ್ಮ ತಾಯಿಗೆ ತಂದೆ ತುಂಬಾ ಟಾರ್ಚರ್ ಕೊಡ್ತಾ ಇದ್ರು, ಆ ಪ್ರೇರಣೆಯಿಂದ ಈ ಹಾಡು ಮಾಡಿದ್ದೇನೆ. ನೈಜಕ್ಕೆ ಪೂರಕವಾಗಿ ಬರಬೇಕೆಂದು ಬಹಳಷ್ಟು ಶ್ರಮಪಟ್ಟು ಕೆಲಸ ಮಾಡಿದ್ದೇವೆ. ಈ ಹಾಡಿನಲ್ಲಿ ನಟಿಸಿರುವ ಹಿರಿಯ ನಟ ನವೀನ್. ಡಿ. ಪಡೀಲ್ ತಂದೆಯಾಗಿ ಹಾಗೂ ಮಧುಮತಿ ತಾಯಿಯ ಪಾತ್ರವನ್ನ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ. ಈ ಹಾಡನ್ನ ವೆಂಕಟೇಶ್ ಕುಲಕರ್ಣಿ ಬರೆದಿದ್ದಾರೆ. ನಮ್ಮ ಸಿನಿಮಾದಲ್ಲಿ ಎಲ್ಲಾ ರೀತಿಯ ಅಂಶಗಳ ಜೊತೆ ಹೊಸ ಕಂಟೆಂಟ್ ಒಳಗೊಂಡಿದೆ ಎಂದರು.
