ಉದಯವಾಹಿನಿ, ನಟ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ ಶೆಟ್ಟಿ ನಟನೆಯ ಕರಾವಳಿ ಸಿನಿಮಾದ ‘ಮುದ್ದು ಗುಮ್ಮ…ಮುದ್ದು ಗುಮ್ಮ ನೀನೇನಾ…’ ಹಾಡು ರಿಲೀಸ್ ಆಗಿದ್ದು, ಸಂಗೀತಪ್ರಿಯರ ಹೃದಯ ಗೆದ್ದಿದೆ. ಸಿದ್ ಶ್ರೀರಾಮ್ ಧ್ವನಿಯಲ್ಲಿ ಈ ಹಾಡು ಮೂಡಿಬಂದಿರುವುದು ವಿಶೇಷ. ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾವು ಭಾರಿ ನಿರೀಕ್ಷೆಯನ್ನು ಹುಟ್ಟಹಾಕಿದೆ. ಇದೀಗ ಹಾಡಿನ ಮೂಲಕ ಕರಾವಳಿ ಸಿನಿಮಾ ಗಮನಸೆಳೆಯುತ್ತಿದೆ.
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ʻಕರಾವಳಿʼ ಸಿನಿಮಾವು ಭಾರಿ ನಿರೀಕ್ಷೆ ಮೂಡಿಸಿದ್ದು, ಈಗಾಗಲೇ ಟೀಸರ್ ಮತ್ತು ಪೋಸ್ಟರ್‌ಗಳಿಂದ ನಿರೀಕ್ಷೆ ದುಪ್ಪಟ್ಟಾಗಿದೆ. ಇದೀಗ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಈ ರೊಮ್ಯಾಂಟಿಂಕ್ ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ನಟಿಸಿದ್ದು ಸಿಕ್ಕಾಪಟ್ಟೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಚಿನ್ ಬಸ್ರೂರು ಸಂಗೀತ ನೀಡಿರುವ ಮುದ್ದು ಗುಮ್ಮ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಪುಟ್ಟ ಟೀಸರ್ ಮೂಲಕವೇ ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಕರಾವಳಿ ಇದೀಗ ಮೆಲೋಡಿ ರೊಮ್ಯಾಂಟಿಕ್ ಹಾಡನ್ನ ರಿಲೀಸ್ ಮಾಡಿ ಮತ್ತಷ್ಟು ಕಾತರವನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾ ಯಾವಾಗ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಶೀಘ್ರದಲ್ಲೇ ಚಿತ್ರತಂಡ ಉತ್ತರ ನೀಡಲಿದೆಯಂತೆ.ಕರಾವಳಿ ಹೆಸರೆ ಹೇಳುವ ಹಾಗೆ, ಅಲ್ಲಿನ ಸಂಸ್ಕೃತಿ, ಸೊಗಡಿನ ಬಗ್ಗೆ ಇರುವ ಸಿನಿಮಾ ಇದಾಗಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಇದ್ದಾರೆ. ಮಾವೀರ ಎನ್ನುವ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಇನ್ನೂ ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಹಾಗೂ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್‌ಗೆ ಈ ಸಿನಿಮಾದಿಂದ ಹೊಸ ಇಮೇಜ್ ಸಿಗಲಿದೆ ಎಂಬ ಟಾಕ್ ಕೇಳಿಬಂದಿದೆ.
