ಉದಯವಾಹಿನಿ, ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬಂದಿದೆ. ಡಬ್ಲ್ಯೂಹೆಚ್‌ಒನಲ್ಲಿ ತನ್ನ ಸದಸ್ಯತ್ವವನ್ನು ಅಮೆರಿಕ ಅಧಿಕೃತವಾಗಿ ರದ್ದುಗೊಳಿಸಿದೆ. ಅಮೆರಿಕ ನಿರ್ಧಾರದ ಬಳಿಕ ಜಿನಿವಾದಲ್ಲಿರುವ WHO ಕಚೇರಿಯಲ್ಲಿ ಅಮೆರಿಕದ ಧ್ವಜ ತೆರವು ಮಾಡಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಪ್ಪಾಗಿ ನಿರ್ವಹಿಸಿದೆ ಮತ್ತು ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲು ವಿಫಲವಾಗಿದೆ ಯುಎಸ್‌ ಆರೋಪಿಸಿತ್ತು. ರೋಗಗಳ ಕಣ್ಗಾವಲು ಮತ್ತು ನಿರ್ಣಾಯಕ ಆರೋಗ್ಯ ಸವಾಲುಗಳಂತಹ ವಿಷಯಗಳ ಕುರಿತು ಇತರ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಹಕಾರಕ್ಕೆ ಅಮೆರಿಕ ಆದ್ಯತೆ ನೀಡುತ್ತದೆ. ಆದರೆ, WHO ವೀಕ್ಷಕನಾಗಿಯೂ ಮುಂದುವರಿಯಲ್ಲ ಎಂದ ಆರೋಗ್ಯ ಇಲಾಖೆ ತಿಳಿಸಿದೆ.

2024 ಮತ್ತು 2025 ರ ಸದಸ್ಯತ್ವ ಶುಲ್ಕದಲ್ಲಿ ಅಮೆರಿಕ ಇನ್ನೂ ಸುಮಾರು 260 ಮಿಲಿಯನ್ ಡಾಲರ್‌ಗಳನ್ನು ಬಾಕಿ ಉಳಿಸಿಕೊಂಡಿದೆ. ಬಾಕಿಗಳನ್ನು ಪಾವತಿಸದೆ, ಸಂಪೂರ್ಣ ಬೇರ್ಪಡಿಕೆ ಸಾಧ್ಯವಿಲ್ಲ. ಅಮೆರಿಕಾದ ನಿರ್ಧಾರದ ಬಳಿಕ WHO ವಕ್ತಾರರು ತಿಳಿಸಿದ್ದಾರೆ.

ಚೀನಾದ ವುಹಾನ್‌ನಲ್ಲಿ ಉದ್ಭವಿಸಿದ COVID-19 ಸಾಂಕ್ರಾಮಿಕ ರೋಗವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ತಪ್ಪಾಗಿ ನಿರ್ವಹಿಸಿದೆ. ತುರ್ತಾಗಿ ಅಗತ್ಯವಿರುವ ಸುಧಾರಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫಲವಾಗಿದೆ. WHO ಸದಸ್ಯ ರಾಷ್ಟ್ರಗಳ ಅನುಚಿತ ರಾಜಕೀಯ ಪ್ರಭಾವದಿಂದ ಸ್ವಾತಂತ್ರ್ಯವನ್ನು ಪ್ರದರ್ಶಿಸುವಲ್ಲಿ ಅಸಮರ್ಥತೆಯಿಂದಾಗಿ, ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಹೊರಬಂದಿದೆ ಎಂದು ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಮತ್ತು ಅಮೆರಿಕದ ವಿದೇಶಾಂಗ ಇಲಾಖೆ ಇಂದು ಘೋಷಿಸಿವೆ.

Leave a Reply

Your email address will not be published. Required fields are marked *

error: Content is protected !!