ಉದಯವಾಹಿನಿ, : ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಕೆಲವು ರಾಜ್ಯಗಳಲ್ಲಿ ಲೀಟರ್ಗೆಗೆ ₹110ಕ್ಕೂ ಹೆಚ್ಚು ಬೆಲೆ ಇದೆ. ಇದೇ ಕಾರಣಕ್ಕೆ ಜನರು ವಿದ್ಯುತ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಇಂತಹ ಸಮಯದಲ್ಲಿ, ಒಂದು ದೇಶದಲ್ಲಿ ಪೆಟ್ರೋಲ್ ಕೇವಲ ₹2ಕ್ಕೆ ಸಿಗುತ್ತಿದೆ ಎಂಬ ಸುದ್ದಿ ಅಚ್ಚರಿ ಮೂಡಿಸಿದೆ.ಈ ಅಗ್ಗದ ಪೆಟ್ರೋಲ್ ಸಿಗುವ ದೇಶವೇ ವೆನೆಜುವೆಲಾ. ಡಾಲರ್‌ನಲ್ಲಿ ಹೇಳುವುದಾದರೆ, ಇಲ್ಲಿ ಲೀಟರ್ ಪೆಟ್ರೋಲ್ ಬೆಲೆ ಕೇವಲ $0.02 ಮಾತ್ರ. ಸಾಮಾನ್ಯವಾಗಿ ಅರಬ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಇಂಧನ ಅಗ್ಗವೆಂದು ನಾವು ಭಾವಿಸುತ್ತೇವೆ. ಆದರೆ ಅಲ್ಲಿ ಕೂಡ ಇಷ್ಟು ಕಡಿಮೆ ಬೆಲೆ ಇಲ್ಲ.
ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿರುವ ದೇಶ. ಇಲ್ಲಿ ಅಪಾರ ಪ್ರಮಾಣದ ಕಚ್ಚಾ ತೈಲ ಲಭ್ಯವಿದ್ದು, ಜನಸಂಖ್ಯೆ ಕಡಿಮೆ ಇರುವುದರಿಂದ ಸರ್ಕಾರ ಇಂಧನಕ್ಕೆ ಭಾರಿ ಸಬ್ಸಿಡಿ ನೀಡುತ್ತಿದೆ. ಇದರ ಪರಿಣಾಮವಾಗಿ ಪೆಟ್ರೋಲ್ ಬೆಲೆ ಇಷ್ಟು ಕಡಿಮೆಯಾಗಿದೆ.ಅಂಕಿ-ಅಂಶಗಳ ಪ್ರಕಾರ, ವೆನೆಜುವೆಲಾದಲ್ಲಿ ಸುಮಾರು 3.03 ಬಿಲಿಯನ್ ಬ್ಯಾರೆಲ್ ತೈಲ ಸಂಗ್ರಹವಿದೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು $17.3 ಟ್ರಿಲಿಯನ್ ಆಗಿದ್ದು, ಭಾರತೀಯ ಹಣದಲ್ಲಿ ಸುಮಾರು 1,400 ಲಕ್ಷ ಕೋಟಿ ರೂಪಾಯಿಗಳಷ್ಟು ಆಗುತ್ತದೆ. ಇಷ್ಟು ಸಂಪನ್ಮೂಲಗಳಿದ್ದರೂ ದೇಶದ ಆರ್ಥಿಕ ಸ್ಥಿತಿ ಮಾತ್ರ ದುರ್ಬಲವಾಗಿದೆ.
1990ರ ದಶಕದಲ್ಲಿ ವೆನೆಜುವೆಲಾ ದಿನಕ್ಕೆ ಸುಮಾರು 3.5 ಮಿಲಿಯನ್ ಬ್ಯಾರೆಲ್ ತೈಲ ಉತ್ಪಾದಿಸುತ್ತಿತ್ತು. ಆದರೆ ಆರ್ಥಿಕ ಬಿಕ್ಕಟ್ಟು, ಆಡಳಿತದ ದೋಷಗಳು ಮತ್ತು ಅಮೆರಿಕದ ನಿರ್ಬಂಧಗಳಿಂದಾಗಿ ಈಗ ಉತ್ಪಾದನೆ ದಿನಕ್ಕೆ 1 ಮಿಲಿಯನ್ ಬ್ಯಾರೆಲ್‌ಗಿಂತ ಕಡಿಮೆಯಾಗಿದೆ. ಜಾಗತಿಕ ತೈಲ ಉತ್ಪಾದನೆಯಲ್ಲಿ ಇದರ ಪಾಲು ಕೇವಲ 1% ಮಾತ್ರ.ಅಮೆರಿಕ ಈಗ ವೆನೆಜುವೆಲಾದ ತೈಲದತ್ತ ಮತ್ತೆ ಕಣ್ಣಿಟ್ಟಿದೆ. ತೈಲ ಹೊರತೆಗೆಯಲು ಹೂಡಿಕೆ ಮಾಡಲು ಅಮೆರಿಕನ್ ಕಂಪನಿಗಳಿಗೆ ಪ್ರೋತ್ಸಾಹ ನೀಡುವ ಯೋಜನೆಗಳು ನಡೆಯುತ್ತಿವೆ. ಆದರೆ ರಾಜಕೀಯ ಅಸ್ಥಿರತೆ ಮತ್ತು ಭವಿಷ್ಯದ ಅನಿಶ್ಚಿತತೆ ಕಾರಣದಿಂದಾಗಿ ಈ ಯೋಜನೆಗಳು ಎಷ್ಟು ಯಶಸ್ವಿಯಾಗುತ್ತವೆ ಎಂಬುದು ಇನ್ನೂ ಪ್ರಶ್ನೆಯಾಗಿದೆ.
