ಉದಯವಾಹಿನಿ, : ಸಾಮಾನ್ಯ ಇಡ್ಲಿ ಮಾಡಲು ಅಕ್ಕಿ-ಬೇಳೆಯನ್ನು ರಾತ್ರಿ ನೆನೆಸಿ, ಬೆಳಗ್ಗೆ ರುಬ್ಬಿ, ಹುದುಗಿಸಿ ಬೇಯಿಸಬೇಕು. ಆದರೆ ತಕ್ಷಣಕ್ಕೆ ಇಡ್ಲಿ ಬಯಸಿದಾಗ ಅಥವಾ ಸಮಯ ಕಡಿಮೆ ಇದ್ದಾಗ ಏನು ಮಾಡಬೇಕು ಗೊತ್ತಾ? ಇಲ್ಲಿ ಜೋಳದ ಹಿಟ್ಟು (Jowar) ಮತ್ತು ಬಾಂಬೆ ರವೆಯನ್ನು ಬಳಸಿ ತಯಾರಿಸುವ ತಕ್ಷಣದ ಇಡ್ಲಿ ರೆಸಿಪಿ ಅದುವೇ ಜೋಳದ ಇಡ್ಲಿ ರೆಸಿಪಿ ಇಲ್ಲಿದೆ. ಇದು ರಾತ್ರಿ ನೆನೆಸುವ ಅಗತ್ಯವಿಲ್ಲ, ಕೇವಲ 15-20 ನಿಮಿಷಗಳಲ್ಲಿ ಹಿಟ್ಟು ಸಿದ್ಧವಾಗಿ, 12-15 ನಿಮಿಷಗಳಲ್ಲಿ ಇಡ್ಲಿ ಬೇಯುತ್ತದೆ.
ಈ ಜೋಳದ ಇಡ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೋಳದ ಹಿಟ್ಟು ಫೈಬರ್, ಪ್ರೋಟೀನ್, ಐರನ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಗ್ಲೂಟನ್ ಫ್ರೀ ಆಗಿರುವುದರಿಂದ ಎಲ್ಲರಿಗೂ ಸೂಕ್ತ. ನೀವು ಕೂಡ ಒಮ್ಮೆ ಟ್ರೈ ಮಾಡಿ.
ಆರೋಗ್ಯಕ್ಕೆ ಬೆಸ್ಟ್ ಈ ಜೋಳದ ಇಡ್ಲಿ
ಜೋಳದ ಇಡ್ಲಿ ಆರೋಗ್ಯಕ್ಕೆ ಬಹಳ ಉತ್ತಮ. ಮತ್ತು ಇದು ಕಡಿಮೆ ಸಮಯದಲ್ಲಿ ಆದಷ್ಟು ಬೇಗ ಮಾಡಬಹುದು. ಮಕ್ಕಳು ಮತ್ತು ಹಿರಿಯರು ಇಷ್ಟಪಡುವ ಈ ಇಡ್ಲಿ ಮೃದುವಾಗಿ, ಸ್ಪಂಜಿ ಆಗಿ ಬರುತ್ತದೆ. ಚಟ್ನಿ, ಸಾಂಬಾರ್ ಜೊತೆಗೆ ಸವಿದರೆ ಅದ್ಭುತ ರುಚಿ. ಬೆಳಗ್ಗಿನ ಉಪಹಾರಕ್ಕೆ ಅಥವಾ ಸಂಜೆ ತಿಂಡಿಗೆ ಸೂಪರ್ ಆಯ್ಕೆ. ನಿಮಗೆ ಬೇಗ ಇಡ್ಲಿ ತಿನ್ನಬೇಕು ಎಂದು ಬಯಸಿದರೆ ಹೀಗೆ ಸೂಪರ್ ಫಾಸ್ಟ್ ಆಗಿ ಮಾಡಬಹುದು.
ಬೇಕಾಗುವ ಸಾಮಗ್ರಿಗಳು!
ಜೋಳದ ಹಿಟ್ಟು: 1 ಕಪ್
ಬಾಂಬೆ ರವೆ (ಉಪ್ಮಾ ರವೆ): ½ ಕಪ್
ಮೊಸರು: 1 ಕಪ್
ನೀರು: ½ ಕಪ್ (ಅಥವಾ ಹಿಟ್ಟು ತೆಳು ಮಾಡಲು ಅಗತ್ಯವಾದಷ್ಟು)
ಬೇಕಿಂಗ್ ಸೋಡಾ : ¼ ಟೀಸ್ಪೂನ್
ಉಪ್ಪು: ರುಚಿಗೆ ತಕ್ಕಷ್ಟು
ತುಪ್ಪ ಅಥವಾ ಎಣ್ಣೆ: ಇಡ್ಲಿ ತಟ್ಟೆಗಳಿಗೆ ಹಚ್ಚಲು ಸ್ವಲ್ಪ
