ಉದಯವಾಹಿನಿ,  ಬೇಸಿಗೆ ಆರಂಭದಲ್ಲೇ ಬಿಸಿಲಿ ಅಬ್ಬರ ಜೋರಾಗಿದೆ. ಬಿಸಿಲು ಝಳವು ಕ್ರಮೇಣ ಹೆಚ್ಚಾಗುತ್ತಿದೆ. ಇದರೊಂದಿಗೆ ಬೇಸಿಗೆ ಋತುವಿನಲ್ಲಿ ಉಲ್ಲಾಸಕರವಾದ ಹೆಚ್ಚಿನ ಆಹಾರವನ್ನು ತಿನ್ನಲು ಅಥವಾ ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ. ಈ ರೆಸಿಪಿಗಳಲ್ಲಿ ಅಂಬಾಲಿ ಅವುಗಳಲ್ಲಿ ಒಂದು. ಕೆಲವು ಸ್ಥಳಗಳಲ್ಲಿ ಗಂಜಿ, ಜಾವಾ ಹಾಗೂ ಅಂಬಲಿ ಎಂದು ಕರೆಯುತ್ತಾರೆ. ಆದರೆ ಕೆಲವರು ಇದನ್ನು ಕುಡಿಯಲು ಇಷ್ಟಪಡುವುದಿಲ್ಲ.
ಸಾಮಾನ್ಯ ರೀತಿಯಲ್ಲಿ ಭಿನ್ನವಾಗಿ ಜೋಳದ ಅಂಬಲಿಯನ್ನು ಈ ರೀತಿ ತಯಾರಿಸಿದರೆ, ಮಕ್ಕಳು ಹಾಗೂ ವಯಸ್ಕರು ಇದನ್ನು ಕುಡಿಯಲು ಇಷ್ಟಪಡುತ್ತಾರೆ. ಇದಲ್ಲದೇ, ಇದಕ್ಕಾಗಿ ನೀವು ಹೆಚ್ಚು ಸಮಯ ಮೀಸಲಿಡಬೇಕಾದ ಅಗತ್ಯವಿಲ್ಲ. ಮನೆಯಲ್ಲಿ ಲಭ್ಯವಿರುವ ಪದಾರ್ಥಗಳೊಂದಿಗೆ ಇದನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಬಾಯಲ್ಲಿ ನೀರೂರಿಸುವ ತುಂಬಾ ರುಚಿಕರವಾದ ಜೋಳದ ಅಂಬಲಿ ಮಾಡಲು ಬೇಕಾಗುವ ಪದಾರ್ಥಗಳೇನು? ಅಂಬಲಿ ತಯಾರಿಸುವ ವಿಧಾನ ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಜೋಳದ ಹಿಟ್ಟು – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಈರುಳ್ಳಿ – 2
ಹಸಿಮೆಣಸಿನಕಾಯಿ – 4
ಮಜ್ಜಿಗೆ – ಒಂದು ಲೀಟರ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ಬೇಸಿಗೆಯಲ್ಲಿ ಹೇಳಿ ಮಾಡಿಸಿದ ಜೋಳದ ಅಂಬಲಿ ಸಿದ್ಧಪಡಿಸಲು ಮೊದಲಿಗೆ ಎರಡು ಕಪ್ ಜೋಳದ ಹಿಟ್ಟನ್ನು ಒಂದು ಬಟ್ಟಲಿನಲ್ಲಿ ಹಾಕಿ.
ಈಗ ನಾಲ್ಕು ಕಪ್ ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಹಾಗೂ ಉಂಡೆಗಳಿಲ್ಲದೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
ಜೊತೆಗೆ ಎರಡು ಈರುಳ್ಳಿ ಹಾಗೂ ನಾಲ್ಕು ಹಸಿರು ಮೆಣಸಿನಕಾಯಿಗಳನ್ನು ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ.
ಈಗ ಒಲೆ ಆನ್ ಮಾಡಿ ಮತ್ತು ಪಾತ್ರೆಯಲ್ಲಿ ಹತ್ತು ಕಪ್ ನೀರು ಸುರಿಯಿರಿ. ನೀರು ಕುದಿಯುತ್ತಿರುವಾಗ ಜ್ವಾಲೆಯನ್ನು ಕಡಿಮೆ ಉರಿಯಲ್ಲಿ ಇರಿಸಿ ಮತ್ತು ಜೋಳದ ಹಿಟ್ಟಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಈ ಮಿಶ್ರಣವನ್ನು ಸ್ವಲ್ಪ ದಪ್ಪವಾಗುವವರೆಗೆ 10 ನಿಮಿಷಗಳ ಕಾಲ ಬೇಯಿಸಿ ಹಾಗೂ ಒಲೆ ಆಫ್ ಮಾಡಿ. ಬಳಿಕ ಇನ್ನೊಂದು ಐದು ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ, ಮುಚ್ಚಿ ಹತ್ತು ನಿಮಿಷಗಳ ಕಾಲ ಪಕ್ಕಕ್ಕೆ ಇಡಿ.
ಹತ್ತು ನಿಮಿಷಗಳ ನಂತರ, ಈ ಅಂಬಲಿಯನ್ನು ಮತ್ತೆ ಮಿಶ್ರಣ ಮಾಡಿ. ಒಂದು ಲೀಟರ್ ಮಜ್ಜಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಬೇಕಾಗುತ್ತದೆ.
ಮನೆ ಎಲ್ಲ ಸದಸ್ಯರಿಗೆ ಇಷ್ಟವಾಗುವಂತಹ ರುಚಿಕರವಾದ ಸವಿಯಲು ಅಂಬಲಿ ಸಿದ್ಧವಾಗಿದೆ.
ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಇಲ್ಲದೆ ಬೇಳೆ ಅಂಬಲಿ ಕುಡಿದರೂ ಸೂಪರ್ ಆಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!