ಉದಯವಾಹಿನಿ, ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿರೋ ಪುಡಾರಿ ರಾಜೀವ್ ಗೌಡ ಬಂಧನ ಭೀತಿಯಿಂದ ಈಗ ಊರೂರು ಅಲೆಯುವಂತಾಗಿದೆ. ಕಚೇರಿಗೆ ಬೆಂಕಿ ಹಾಕಿಸ್ತೀನಿ, ಚಪ್ಪಯಲ್ಲಿ ಹೊಡೆಸ್ತೀನಿ, ತಾಲೂಕು ಬಿಟ್ಟು ಒಡಿಸ್ತೀನಿ ಅಂತ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡನೇ ಈಗ ಊರು ಬಿಟ್ಟು ದಿಕ್ಕಾಪಾಲಾಗಿ ಓಡುವಂತಾಗಿದೆ. ಆದ್ರೆ 12 ದಿನ ಕಳೆದ್ರೂ ಪುಡಾರಿ ವೀರನನ್ನ ಬಂಧಿಸೋಕೆ ಚಿಕ್ಕಬಳ್ಳಾಪುರ ಪೊಲೀಸರು ಫೇಲ್ ಆಗಿದ್ದು, ರಾಜೀವ್ ಗೌಡ ಬಂಧನ ಯಾವಾಗ ಅಂತ ಪೊಲೀಸರ ಕಾರ್ಯವೈಖರಿಗೆ ಜನ ಛೀಮಾರಿ ಹಾಕುವಂತಾಗಿದೆ. ಅನಧಿಕೃತ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಕರೆ ಮಾಡಿ ಧಮ್ಕಿ ಹಾಕಿದ್ದ ಪುಡಾರಿ ವೀರ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡನೇ ಈಗ ರಾಜ್ಯ ಬಿಟ್ಟು ಪರಾರಿಯಾಗಿದ್ದಾನೆ. ಒಂದಲ್ಲ ಎರಡಲ್ಲ ಅಂತ ಬರೋಬ್ಬರಿ 12 ದಿನಗಳಿಂದ ರಾಜೀವ್ ಗೌಡನೇ ಬಂಧನದ ಭೀತಿಯಂದ ಊರೂರು ಅಲೆಯುವಂತಾಗಿದೆ. ಜಾಮೀನು ಪಡೆದು ಬಂದು ಅಬ್ಬರಿಸೋಣ ಅಂದುಕೊಂಡಿದ್ದ ರಾಜೀವ್ ಗೌಡನಿಗೆ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿ ಮುಖಕ್ಕೆ ಮಂಗಳಾರತಿ ಮಾಡಿದೆ.
