ಉದಯವಾಹಿನಿ, ಬೆಂಗಳೂರು: ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣ ಮಸೂದೆಯ ಅಡಿ ಪೊಲೀಸರು ನೋಟಿಸ್ ನೀಡಿದ್ದು ತಪ್ಪು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.ಮಾಧ್ಯಮಗಳು ದ್ವೇಷ ಭಾಷಣ ಮಸೂದೆಯ ಅಡಿಯಲ್ಲಿ ಪೊಲೀಸರು ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ಹೇಳಿದರು. ಈ ಮಸೂದೆಗೆ ಇನ್ನೂ ರಾಜ್ಯಪಾಲರ ಸಹಿ ಬಿದ್ದಿಲ್ಲ. ಭಾರತೀಯ ನ್ಯಾಯ ಸಂಹಿತೆ ಅಡಿ ವಿವಿಧ ಸೆಕ್ಷನ್‌ಗಳ ಅಡಿ ನೋಟಿಸ್ ನೀಡಬಹುದು. ಇನ್ನೂ ಇದು ಕಾನೂನಾಗದ ಕಾರಣ ಈ ಮಸೂದೆಯ ಅಡಿ ನೋಟಿಸ್ ನೀಡಿದ್ದು ತಪ್ಪು. ಪೊಲೀಸರು ಯಾಕೆ ಈ ರೀತಿ ಮಾಡಿದ್ದಾರೆ ಎನ್ನುವುದನ್ನು ನೋಡಬೇಕು ಎಂದು ಪ್ರತಿಕ್ರಿಯಿಸಿದರು.
