ಉದಯವಾಹಿನಿ, ಮುಂಬೈ:  ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದವರು. ಈಗ ಮತ್ತೊಮ್ಮೆ ತಮ್ಮ ನೇರ ಮಾತುಗಳಿಂದಲೇ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಕಳೆದ ವರ್ಷ ನೀಲಿ ಚಿತ್ರದ ನಿರ್ಮಾಣದ ಕುರಿತಾಗಿ ರಾಜ್ ಕುಂದ್ರಾ ಬಂಧನವಾಗಿತ್ತು. ಈ ಸಂದರ್ಭದಲ್ಲಿ ಶೆರ್ಲಿನ್ ರಾಜ್ ಕುಂದ್ರಾ ಜೊತೆಗಿನ ಹಳೆಯ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ತಾನು ಹಣಕ್ಕಾಗಿ ಲೈಂಗಿಕ ಕ್ರಿಯೆ ನಡೆಸಿದ್ದೇನೆ ಎಂದು ಮುಕ್ತವಾಗಿ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದರು. ಈಗ ಮತ್ತೊಮ್ಮೆ ಈ ಹೇಳಿಕೆ ಬಗ್ಗೆ ನಟಿ ಶೆರ್ಲಿನ್ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿಗೆ ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶವೊಂದರಲ್ಲಿ ನಟಿ ಶೆರ್ಲಿನ್ ನೇರವಾಗಿ ತಮಗೆ ಅನಿಸಿದ್ದನ್ನ ಹೇಳಿಕೊಂಡಿದ್ದಾರೆ. ಈ ಮೊದಲು ಹಣಕ್ಕಾಗಿ ನಾನು ಹಲವು ಜನರ ಜೊತೆ ಮಲಗಿದ್ದೆ. ಈಗ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಆದರೆ ಈಗ ಹಣಕ್ಕಾಗಿ ನಾನು ಅಂಥ ಕೆಲಸ ಮಾಡುತ್ತಿಲ್ಲ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.
ಇಷ್ಟೇ ಅಲ್ಲದೆ ತಾನು ಈ ಹಿಂದೆ ರಾಜಕಾರಣಿಯ ಮಗನೊಬ್ಬನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದೆ ಆತ ನನಗೆ ಲೈಂಗಿಕತೆಗಾಗಿ ದುಬಾರಿ ಊಡುಗೊರೆಗಳನ್ನು ನೀಡುತ್ತಿದ್ದನು ಎಂದು ರಾಜಕಾರಣಿಯ ಪುತ್ರನ ನಡವಳಿಕೆ ಬಗ್ಗೆ ನಟಿ ಶೆರ್ಲಿನ್ ಹೇಳಿದ್ದಾರೆ. ಇಷ್ಟೇ ಅಲ್ಲದೆ ಸಿನಿಮಾ ಆಡಿಷನ್ ನೀಡುವಾಗ ಅನೇಕ ನಿರ್ದೇಶಕ-ನಿರ್ಮಾಪಕರು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!