ಉದಯವಾಹಿನಿ,
ನವದೆಹಲಿ: ವಿಶ್ವದಲ್ಲಿಯೇ ಭಾರತ ಅತ್ಯಧಿಕ ಸಂಖ್ಯೆಯ ದ್ವಿಚಕ್ರ ವಾಹನ ನೋಂದಾಯಿಸಿದ್ದು ಹೆಚ್ಚು ದ್ವಿಚಕ್ರ ವಾಹನ ಹೊಂದಿದೆ. ಇಂಡೋನೇಷ್ಯಾ ನಂತರದ ಸ್ಥಾನದಲ್ಲಿದೆ. ಭಾರತದಲ್ಲಿ ಒಟ್ಟಾರೆ ಅಪಘಾತದಲ್ಲಿ ದ್ವಿಚಕ್ರವಾಹನ ಅಪಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಶೇ.೪೫ ರಷ್ಟು ಇದೆ. ಇನ್ನುಳಿದಂತೆ ಪ್ರಯಾಣಿಕ ಕಾರುಗಳ ಸಂಖ್ಯೆಯಲ್ಲಿ ಭಾರತ, ವಿಶ್ವದಲ್ಲಿ ಎಂಟನೇ ಸ್ಥಾನದಲ್ಲಿದ್ದರೆ, ಚೀನಾ, ಅಮೇರಿಕಾ ಮತ್ತು ಜಪಾನ್ ಮೊದಲ ಮೂರು ಸ್ಥಾನದಲ್ಲಿವೆ ಎಂದು ಅಂತರರಾಷ್ಟ್ರೀಯ ರಸ್ತೆ ಒಕ್ಕೂಟದ ೨೦೨೦ ರ ಡೇಟಾ ಈ ವಿಷಯ ತಿಳಿಸಿದೆ.
ನೋಂದಾಯಿತ ವಾಹನಗಳ ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾಹಿತಿ ಒಟ್ಟುಗೂಡಿಸಿ ೨೦೨೦ ರಲ್ಲಿ ಭಾರತದಲ್ಲಿ ೩೨.೬೩ ಕೋಟಿ ವಾಹನ ಹೊಂದಿತ್ತು ಮತ್ತು ಇವುಗಳಲ್ಲಿ ಸುಮಾರು ಶೇ. ೭೫ ದ್ವಿಚಕ್ರ ವಾಹನಗಳಾಗಿವೆ ಎಂದು ಹೇಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ, ಎರಡು ಕೋಟಿಗಿಂತ ಸ್ವಲ್ಪ ಹೆಚ್ಚು ವಾಹನಗಳು ನೋಂದಾಯಿಸಲ್ಪಟ್ಟಿವೆ, ಜುಲೈ ಮಧ್ಯದವರೆಗೆ ಒಟ್ಟು ಸಂಖ್ಯೆಯಲ್ಲಿ ಸುಮಾರು ೩೪.೮ ಕೋಟಿಗೆ ತೆಗೆದುಕೊಂಡಿದೆ ಎಂದು ಕೇಂದ್ರ ಸರ್ಕಾರದ ಭೂಸಾರಿಗೆ ಸಚಿವಾಲಯ ಈ ವಿಷಯ ತಿಳಿಸಿದೆ.
ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಮಹಾರಾಷ್ಟ್ರ ಗರಿಷ್ಠ ಸಂಖ್ಯೆಯ ನೋಂದಾಯಿತ ವಾಹನ ಅಂದರೆ ೩.೭೮ ಕೋಟಿ ಹೊಂದಿದ್ದು, ಉತ್ತರ ಪ್ರದೇಶ ೩.೪೯ ಕೋಟಿ ಮತ್ತು ತಮಿಳುನಾಡು ೩.೨೧ ಕೋಟಿ ನಂತರದ ಸ್ಥಾನದಲ್ಲಿದೆ ಎಂದು ಸರ್ಕಾರದ ಅಂಕಿಅಂಶಗಳು ಮಾಹಿತಿ ನೀಡಿವೆ. ೫೫ ದಶಲಕ್ಷಕ್ಕೂ ನಗರಗಳು ದೇಶದಲ್ಲಿನ ಎಲ್ಲಾ ನೋಂದಾಯಿತ ಖಾಸಗಿ ವಾಹನಗಳಲ್ಲಿ ಶೇ.೩೪ ಪಾಲನ್ನು ಹೊಂದಿದ್ದು, ಸಾಕಷ್ಟು ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ಜನರು ಖಾಸಗಿ ವಾಹನಗಳನ್ನು ಹೊಂದಿದ್ದಾರೆ.
