ಉದಯವಾಹಿನಿ , ಚಿಕ್ಕಬಳ್ಳಾಪುರ: ಮಾತಿಗೆ ಮಾತು ಬೆಳೆದು ಜಗಳ ಆಗಿ ವಿವಾಹಿತ ಪ್ರಿಯತಮೆಯನ್ನ ಕೊಂದು ವಿವಾಹಿತ ಪ್ರಿಯಕರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನಲ್ಲಿ ನಡೆದಿದೆ. ಚೇಳೂರು ತಾಲೂಕಿನ ಗರಿಗಿರೆಡ್ಡಿ ಪಾಳ್ಯದಲ್ಲಿ 40 ವರ್ಷದ ಸಲ್ಮಾ ಎಂಬಾಕೆಯನ್ನ ಆಕೆಯ ಪ್ರಿಯರಕ 46 ವರ್ಷದ ಬಾಬಾಜಾನ್ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಚೇಳೂರಿನ ತನ್ನ ಮನೆಗೆ ಬಂದಿರೋ ಪ್ರಿಯಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಲ್ಮಾಗೆ ಗಂಡ ಇಬ್ಬರು ಮಕ್ಕಳಿದ್ರೂ ಕಳೆದ 6 ವರ್ಷಗಳಿಂದ ಬಾಬಾಜಾನ್ ಸಹವಾಸ ಬೆಳೆಸಿಕೊಂಡಿದ್ದಳು. ಇನ್ನೂ ಬಾಬಾಜಾನ್ ಗೂ ಮದುವೆಯಾಗಿ 3 ಮಕ್ಕಳಿದ್ದು ಹೆಂಡತಿ ಮಕ್ಕಳು ಬಿಟ್ಟು ಹೋಗಿದ್ದಾರೆ. ಈ ಸಂಬಂಧ ಮೃತದೇಹಗಳನ್ನ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
