
ಉದಯವಾಹಿನಿ ದೇವದುರ್ಗ :- ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಮತ್ತು ಶಿಕ್ಷಣ ಸಚಿವರ ಸುದ್ದಿಗೋಷ್ಠಿಯ ಹೇಳಿಕೆಯನ್ನು ಪರಿಗಣಿಸಿ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಶಿಕ್ಷಕರಾದ ನಮ್ಮನ್ನು BLO ಕರ್ತವ್ಯದಿಂದ ಬಿಡುಗಡೆ ಗೊಳಿಸುವಂತೆ ಮನವಿ ಪತ್ರ ನೀಡಲಾಯಿತು ಅವರು ಮಂಗಳವಾರದಂದು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮನವಿ ಪತ್ರ ತಹಸೀಲ್ದಾರ್ ಕೆ ವೈ ಬಿದರಿ ಯವರ ಜೊತೆ ಶಿಕ್ಷಕರು ಮಾತನಾಡಿದ ಬಳಿಕ ಡಿ. ಮಹಾಂತೇಶ್ ಬಳ್ಳಾರಿ ಮಾತನಾಡಿ BLO ಗಳು ಮತಗಟ್ಟೆಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುವುದರಿಂದ ಮಕ್ಕಳ ಕಲಿಕಾ ಮಟ್ಟಕ್ಕೆ ಅಡ್ಡಪರಿಣಾಮ ಬಿರುತ್ತದೆ, ಇನ್ನು ಅನೇಕ ಶಾಲಾ ಒತ್ತಡಗಳಿಂದ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ನಮಗೆ ತುಂಬಾ ತೊಂದರೆ ಯಾಗುತ್ತಿದ್ದೂ ನಮಗೆ ಶಾಲೆ ಮತ್ತು ಮಕ್ಕಳ ಅಭ್ಯಾಸದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮಗೆ ಆದಷ್ಟು ಬೇಗ ಮಕ್ಕಳ ಹಿತ ದೃಷ್ಟಿಯಿಂದ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಮಕ್ಕಳ ಶಿಕ್ಷಣದ ಕಡೆಗೆ ಗಮನ ಹರಿಸಲು ಕಷ್ಟ ವಾಗುತ್ತಿದ್ದು ನಮ್ಮನ್ನು ಈ ಕೂಡಲೇ BLO ಗಳ ಕರ್ತವ್ಯ ದಿಂದ ನಮಗೆ ವಿಮುಕ್ತಿ ಗೊಳಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಚಂದ್ರಮೌಳೇಶ್ವರ, ಶಿವರಾಜ್ ನಾಯಕ್, ಪ್ರಕಾಶ್ ಹೊನ್ನಕುಣಿ, ನಿಂಗಣ್ಣ ಬಾಗ್ಲಿ, ಶಿವಪ್ಪ ಮುಂಡರಗಿ, ಬಸಯ್ಯ ಸಾತಲ್, ಹೊನ್ನಪ್ಪ, ಬಸವರಾಜ ಮಜ್ಜಗಿ, ಇತರರು ಉಪಸ್ಥಿತರಿದ್ದರು
