ಉದಯವಾಹಿನಿ ಮುದಗಲ್ಲ :ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ನೆರವಾಗಿದೆ. ಶಿಕ್ಷ ಣ ಇಲಾಖೆಯ ಈ ಕ್ರಮ ಶ್ಲಾಘನೆಗೆ ಕಾರಣವಾಗಿದೆ.ಶಾಲೆ ಆರಂಭವಾಯಿತೆಂದರೆ ಪ್ರತೀ ಶಾಲೆಗಳಲ್ಲಿ ಶಾಲಾ ಸಂಸತ್‌ ಚುನಾವಣೆಗೆ ತಯಾರಿ ನಡೆಯುತ್ತದೆ. ಆಯಾ ವರ್ಷದ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ಸಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಪ್ರಯುಕ್ತ ಶಾಲಾ ಸಂಸತ್‌ ರಚನೆ ನಡೆಸುವಂತೆ ಶಿಕ್ಷ ಣ ಇಲಾಖೆ ಆದೇಶಿಸಿದ್ದು ಮಕ್ಕಳಿಗೆ ದೇಶದ ರಾಜಕೀಯ ವ್ಯವಸ್ಥೆಯನ್ನು ತಿಳಿಯುವಲ್ಲಿ ಸಹಕಾರಿ ಯಾಗಿದೆ ಅದರಂತೆ   ಇಂದು ಶ್ರೀ ವಿಜಯ ಮಹಾಂತೇಶ ಹಿ.ಪ್ರಾ.ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಚುನಾವಣೆ ಯನ್ನು ಮಾಡಲಾಯಿತು ಎಂದು ಹಿರಿಯ ಶಿಕ್ಷಕರಾದ ಮಾಧವಭಟ್ಟ ಹೇಳಿದರು. ಈ ಸಂದರ್ಭದಲ್ಲಿ  ಶ್ರೀ ಮಾಧವಭಟ್ಟ ಶಿಕ್ಷಕರು ಚುನಾವಣೆ ಅಧಿಕಾರಿಯಾಗಿ ಹಾಗು  APRO ಶ್ರೀ ಅಮರೇಶ ಶಿಕ್ಷಕರು , 1st PO ಆಗಿ ಶ್ರೀಮತಿ ಮೈಮುನಾ ಬೇಗಂ ಶಿಕ್ಷಕಿಯರು , 2nd PO ಗಳಾಗಿ ಶ್ರೀಮತಿ ಸಾವಿತ್ರಿ ಶಿಕ್ಷಕಿಯರು ಹಾಗು ಪೋಲಿಸ್ ಸಿಬ್ಬಂದಿಯಾಗಿ ಶ್ರೀ ಆನಂದ ಶಿಕ್ಷಕರು ಹಾಗು  Sector Offecer ಆಗಿ
ಶ್ರೀ ಮಹಾಂತೇಶ ಶಿಕ್ಷಕ ರುಗಳು ಚುನಾವಣೆಯ ಅಣುಕು ಕಾಯ್ರದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!