
ಉದಯವಾಹಿನಿ : ಸಲಗ ಸೂರಿ ಅಣ್ಣ ಖ್ಯಾತಿಯ ನಟ ದಿನೇಶ್ ಕುಮಾರ್ ಅವರ ನಿರ್ಮಾಣ ಹಾಗೂ ನಿರ್ದೇಶನದ ಸೂರಿ ಅಣ್ಣ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಹೈಡ್ ಪಾರ್ಕ್ ಹೋಟೆಲ್ ನಲ್ಲಿ ನೆರವೇರಿತು. ಹರೀಶ್ ರಾಯ್ ನಟಿಸಿದ ಕೊನೆಯ ಚಿತ್ರ ಇದಾಗಿದ್ದು, ಅವರ ಪತ್ನಿ ಆರತಿ ಅವರ ಕೈಲೇ ಚಿತ್ರದ ಟ್ರೈಲರ್ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು. ಟ್ರೈಲರ್ ರಿಲೀಸ್ ಮಾಡಿದ ಹರೀಶ್ ರಾಯ್ ಪತ್ನಿ ಆರತಿ ಮಾತನಾಡಿ ಇದು ನಮ್ಮ ಯಜಮಾನರ ಕಡೇ ಸಿನಿಮಾ ಅಂತ ನನಗೂ ಗೊತ್ತಿರಲಿಲ್ಲ. ಈ ಚಿತ್ರಕ್ಕೆ ಖಂಡಿತ ಒಳ್ಳೆಯದಾಗುತ್ತೆ. ಕಷ್ಟದ ಸಮಯದಲ್ಲಿ ಚಿತ್ರರಂಗದ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ. ನನ್ನಪತಿ ಕೊನೆಯವರೆಗೂ ಸಿನಿಮಾ ಬಗ್ಗೆಯೇ ಧ್ಯಾನಿಸುತ್ತಿದ್ದರು. ನನ್ನ ಮಗನೂ ಬೆಳೆದಿದ್ದಾನೆ. ಈತನಿಗೆ ನಿಮ್ಮ ಸಪೋರ್ಟ್ ಬೇಕು. ನಮ್ಮನ್ನು ಮರೆಯಬೇಡಿ ಎಂದು ಕೇಳಿಕೊಂಡರು.
ನಟ ಪ್ರವೀಣ್ ಮಾತನಾಡಿ ಈ ಚಿತ್ರದಲ್ಲಿ ನಾನು ಬ್ಯಾಟ್ ಎಂಬ ಪಾತ್ರ ಮಾಡಿದ್ದೇನೆ. ಮಾರಿಗುಡ್ಡದಲ್ಲಿ ಲೀಡ್ ಆಗಿದ್ದೆ. ಈ ಚಿತ್ರಕ್ಕೆ ವಿಶ್ವ ಅವರು ಕೊಟ್ಟ ಕೊಡುಗೆ ತುಂಬಾ ದೊಡ್ಡದು. ಆತ ದೈಹಿಕವಾಗಿ ನಮ್ಮೊಂದಿಗಿಲ್ಲ, ಆದರೆ ಯಾವಾಗಲೂ ನಮ್ಮಮನದಲ್ಲಿದ್ದಾರೆ ಎಂದರು. ಜಾಕ್ ಜಾಲಿ ಮಾತನಾಡಿ ಚಿತ್ರದಲ್ಲಿ ಸೂರಿಯಣ್ಣನಿಗಾಗಿ ಒಂದೇ ದಿನ ಬಂದು ಹೋಗುವ ಪಾತ್ರ ಮಾಡಿದ್ದೇನೆ. ಟ್ರೈಲರ್ ಸಖತ್ತಾಗಿ ಬಂದಿದೆ. ಈ ಸಿನಿಮಾ ಖಂಡಿತ ಸಕ್ಸಸ್ ಆಗಲಿದೆ ಎಂದರು. ಪ್ರಸಾದ್ ಮಾತನಾಡುತ್ತ ನಾನು ಕಳೆದ 25 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಬಹುತೇಕ ಸ್ಟಾರ್ ಗಳಿಗೆ ಜಿಮ್ ಹೇಳಿಕೊಟ್ಡಿದ್ದೇನೆ. ಯಾವತ್ತೂ ತೆರೆ ಮೇಲೆ ಬಂದವನಲ್ಲ. ಸೂರಿ ಅವರು ಪಾತ್ರ ಮಾಡಿಸಿದ್ದಾರೆ ಎಂದರು.
