ಉದಯವಾಹಿನಿ : ಸಂಗೀತ ಮಾಂತ್ರಿಕ, ಗಾಯಕ ಅರಿಜಿತ್ ಸಿಂಗ್ ಅವರು ತಮ್ಮ ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಹಿನ್ನೆಲೆ ಗಾಯಕನಾಗಿ ಇನ್ನು ಮುಂದೆ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ತೆಗೆದುಕೊಳ್ಳುವುದಿಲ್ಲ. ಈವರೆಗೂ ನನಗೆ ಬೆಂಬಲ ನೀಡಿ, ಇಲ್ಲಿಯವರೆಗೂ ಕರೆತಂದ ಎಲ್ಲರಿಗೂ ಧನ್ಯವಾದ. ಹಿನ್ನೆಲೆ ಗಾಯನಕ್ಕೆ ಧ್ವನಿಯಾಗುವುದನ್ನು ನಿಲ್ಲಿಸಬಹುದು, ಸಂಗೀತ ಸಂಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದೊಂದು ಅದ್ಭುತ ಜರ್ನಿಯಾಗಿತ್ತು. ದೇವರು ನಿಜಕ್ಕೂ ಕರುಣಾಮಯಿ. ಈವರೆಗೂ ಕೇಳುಗರಾಗಿ ಪ್ರೀತಿ ನೀಡಿದ ನಿಮಗೆಲ್ಲರಿಗೂ ಧನ್ಯವಾದ. ಇನ್ನು ಕೆಲವು ಬಾಕಿಯಿರುವ ಪ್ರಾಜೆಕ್ಟ್‌ಗಳನ್ನು ಮುಗಿಸಬೇಕಿದೆ. ಆ ಹಾಡುಗಳು ಈ ವರ್ಷ ರಿಲೀಸ್ ಆಗಲಿವೆ ಎಂದು ತಿಳಿಸಿದ್ದಾರೆ.
ಭಾರತೀಯ ಸಂಗೀತ ಲೋಕದಲ್ಲಿ ಪ್ರಮುಖ ಧ್ವನಿಯಾಗಿದ್ದ ಅರಿಜಿತ್ ಸಿಂಗ್ ದಿಢೀರ್ ನಿವೃತ್ತಿ ಘೋಷಿಸಿರುವುದು ಸಂಗೀತ ಪ್ರಿಯರಲ್ಲಿ ಆಘಾತವನ್ನುಂಟು ಮಾಡಿದೆ. 38 ವರ್ಷಗಳ ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿದ್ದು, ಕೇಸರಿಯಾ , ದೇಸ್ ಮೇರೆ, ಹಮಾರೆ ಅಧೂರಿ ಕಹಾನಿ ಸೇರಿ ಹಲವು ಹಿಟ್ ಗೀತೆಗಳಿಗೆ ಧ್ವನಿಯಾಗಿದ್ದಾರೆ.
