ಉದಯವಾಹಿನಿ : ವಿಶ್ವ ಲೆಜೆಂಡ್ಸ್ ಪ್ರೊಟಿ20 ಲೀಗ್‌ನ ಎರಡನೇ ಪಂದ್ಯದಲ್ಲಿ ಕಿವೀಸ್ ದೈತ್ಯ ಮಾರ್ಟಿನ್ ಗಪ್ಟಿಲ್ ಅವರ ಸ್ಪೋಟಕ ಆಟದ ನೆರವಿನಿಂದ ಶೇನ್ ವಾಟ್ಸನ್ ನೇತೃತ್ವದ ಪುಣೆ ಪ್ಯಾಂಥರ್ಸ್ ತಂಡವು ಗುರುಗ್ರಾಮ್ ಥಂಡರ್ಸ್ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ಗುರುಗ್ರಾಮ್ ಥಂಡರ್ಸ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅನುಭವಿ ಆಟಗಾರ ರಾಸ್ ಟೇಲರ್ (41 ರನ್) ಮತ್ತು ಮೊಹಮ್ಮದ್ ಫೈಝ್ ಖಾನ್ (35 ರನ್) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
160 ರನ್‌ಗಳ ಗುರಿ ಬೆನ್ನತ್ತಿದ ಪುಣೆ ಪ್ಯಾಂಥರ್ಸ್‌ಗೆ ಮಾರ್ಟಿನ್ ಗಪ್ಟಿಲ್ ಆಸರೆಯಾದರು. ಕೇವಲ 28 ಎಸೆತಗಳಲ್ಲಿ 68 ರನ್ ಚಚ್ಚಿದ ಅವರು ಎದುರಾಳಿ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು. ಆರಂಭದಲ್ಲೇ ನಾಯಕ ವಾಟ್ಸನ್ ವಿಕೆಟ್ ಪತನವಾದರೂ, ಗಪ್ಟಿಲ್ ಅವರ ಆಕ್ರಮಣಕಾರಿ ಆಟ ತಂಡದ ರನ್ ಗತಿಯನ್ನು ಕಾಯ್ದುಕೊಂಡಿತು.
ಅಫ್ಘಾನಿಸ್ತಾನದ ಸಾಮಿಯುಲ್ಲಾ ಶಿನ್ವಾರಿ ಪುಣೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲು ಬೌಲಿಂಗ್‌ನಲ್ಲಿ 2 ವಿಕೆಟ್ ಕಿತ್ತ ಅವರು, ನಂತರ ಬ್ಯಾಟಿಂಗ್‌ನಲ್ಲಿ ಕೇವಲ 10 ಎಸೆತಗಳಲ್ಲಿ 21 ರನ್ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು.
“ವಿಕೆಟ್ ಬೀಳುತ್ತಿದ್ದರೂ ರನ್‌ರೇಟ್ ನಿಯಂತ್ರಣದಲ್ಲಿಟ್ಟುಕೊಳ್ಳುವುದು ನಮ್ಮ ಗುರಿಯಾಗಿತ್ತು. ಹಳೆಯ ಸ್ನೇಹಿತರ ವಿರುದ್ಧ ಮೈದಾನಕ್ಕಿಳಿದು ಗೆಲುವು ಸಾಧಿಸಿದ್ದು ಖುಷಿ ತಂದಿದೆ.” ಎಂದು ಮಾರ್ಟಿನ್ ಗಪ್ಟಿಲ್ ಹೇಳಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ:
ಗುರುಗ್ರಾಮ್ ಥಂಡರ್ಸ್: 159/5 (20 ಓವರ್‌ಗಳು)
9 – 41 (36)
ಮೊಹಮ್ಮದ್ ಫೈಝ್ ಖಾನ್ – 35 (27)
ಸಾಮಿಯುಲ್ಲಾಶಿನ್ಸಾರಿ – 3 ಓವರ್‌ಗಳಲ್ಲಿ 42/2
ಪುಣೆ ಪ್ಯಾಂಥರ್ಸ್: 160/6 (17 ಓವರ್‌ಗಳು)
ಮಾರ್ಟಿನ್ ಗಪ್ಟಿಲ್ – 68 (28)
ಸಾಮಿಯುಲ್ಲಾಶಿನ್ವಾರಿ – 21 (8)
ಸ್ಟುವರ್ಟ್ ಬ್ರಾಡ್ – 2 ಓವರ್‌ಗಳಲ್ಲಿ 11/1
