
ಉದಯವಾಹಿನಿ ದೇವದುರ್ಗ:– ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣೆಗೆ ಮಾಡಿ ಸಾಮೂಹಿಕ ಅತ್ಯಚಾರ ನಡೆಸಿದ ಘಟನೆ ಲೆಕ್ಕವಿಲ್ಲದಷ್ಟು ಮಹಿಳಾ ವಿರೋಧಿ ಪ್ರಜಾಪ್ರಭುತ್ವ ವಿರೋಧಿ ಘಟನೆಗಳು ದೇಶದಲ್ಲಿ ನಡೆಯುತ್ತಿರುವುದನ್ನು ಖಂಡಿಸಿ ಸಿಐಟಿಯು, ಕೆಪಿಆರ್ಎಸ್,ಎಐಎಡಬ್ಲೂಯು ಸಂಘಟನೆಗಳ ನೇತೃತ್ವದಲ್ಲಿ ನಗರದ ಕ್ಲಬ್ ನಿಂದ ತಹಶಿಲ್ದಾರರ ಕಛೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡಿಸಿ ಮನವಿ ಸಲ್ಲಿಸಿದರು.ಬಿಜೆಪಿ ಆರ್ ಎಸ್ ಎಸ್ ಶಕ್ತಿಗಳನ್ನು ಒಳಗೊಂಡಿರುವ ಪ್ಯಾಸಿಸ್ಟ್ ಆಡಳಿತ ಈ ವಿಷಯದಲ್ಲಿ ಮೌನವಾಗಿರುವುದು ನಾಚಕಿಗೇಡಿನ ಸಂಗತಿ, ಮಣಿಪುರದಲ್ಲಿ ನಡೆದ ಘಟನೆ ನಾಗರಿಕ ಸಮಾಜವೆ ತಲೆತಗ್ಗಿಸುವಂತೆ ಮಾಡಿದೆ,ತಕ್ಷಣ ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಲೆ ರಾಜಿನಾಮೆ ನೀಡಲು ಒತ್ತಾಯಿಸಿ ದೇವದುರ್ಗ ತಹಶೀಲ್ದಾರ ಕೆ.ವೈ ಬಿದರಿ ಅವರ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿದರು.ಇದೆ ಸಂಧರ್ಭದಲ್ಲಿ ಸಿಐಟಿಯು ಮುಖಂಡರಾದ ಗಿರಿಯಪ್ಪ ಪೂಜಾರಿ, ರೈತ ಸಂಘದ ಮುಖಂಡರಾದ ನರಸಣ್ಣ ನಾಯಕ,ಶಬ್ಬೀರ್, ಹನುಮಂತ ಗುರಿಕಾರ,ಕೂಲಿಕಾರರ ಸಂಘಟನೆ ಮುಖಂಡರಾದ ಲಿಂಗಣ್ಣ ಮಕಾಶಿ,ಸಂಗಮೇಶ ಮೂಲಿಮನಿ, ಮೌನೇಶ ಜಾಲಹಳ್ಳಿ, ಸಂಗಮೇಶ ಮೂಲಿಮನಿ,ಮಕ್ತುಮ್ ಭಾಷಾ,ದುರುಗಪ್ಪ ಹೊರಟ್ಟಿ, ಮಹಾಲಿಂಗ ದೊಡ್ಡಮನಿ, ಬಸವರಾಜ ವಂದ್ಲಿ,ರಾಜು ನಾಯಕ್ ರಿಯಾಜ್,ಹನುಮಂತ ಕಮ್ಮಲದಿನ್ನಿ,ಬಸವರಾಜ ಲಿಂಗದಹಳ್ಳಿ,ಮರಿಯಮ್ಮ,ಶೇಖಮ್ಮ ದೇಸಾಯಿ,ಶ್ರೀಲೇಖಾ,ಮರಿಯಮ್ಮ,ರಮಾದೇ ವಿ.ವಿಜಯಲಕ್ಷ್ಮಿ,ಚಂದ್ರಕಲಾ, ಇನ್ನಿತರರು ಭಾಗವಹಸಿದ್ದರು.
