ಉದಯವಾಹಿನಿ, ಸರಣಿ ಯಶಸ್ವಿ ಸಿನಿಮಾಗಳ ಮೂಲಕ ತಮ್ಮದೇ ಆದ ಗುರುತು ಮೂಡಿಸಿರುವ ನಟಿ ಶ್ರುತಿ ಹಾಸನ್ ಇದೀಗ ಹೊಸ ಲುಕ್‌ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಈಗ ತೆಲುಗು ಸಿನಿಮಾ ‘ಆಕಾಶದ್ದೋ ಓಕಾ ತಾರಾ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೂಲಕ ಗಮನ ಸೆಳೆದಿದ್ದಾರೆ.
ದುಲ್ಕರ್ ಸಲ್ಮಾನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಪವನ್ ಸಾದಿನೇನಿ ನಿರ್ದೇಶನ ಮಾಡುತ್ತಿದ್ದಾರೆ. ಗೀತಾ ಆರ್ಟ್ಸ್ ಹಾಗೂ ಸ್ವಪ್ನ ಸಿನಿಮಾ ಬ್ಯಾನರ್ ಅಡಿಯಲ್ಲಿ ಸಂದೀಪ್ ಗುನ್ನಮ್ ಮತ್ತು ರಮ್ಯಾ ಗುನ್ನಮ್ ನಿರ್ಮಾಣ ಮಾಡುತ್ತಿದ್ದಾರೆ. ದುಲ್ಕರ್‌ಗೆ ನಾಯಕಿಯಾಗಿ ಸಾತ್ವಿಕ ವೀರವಳ್ಳಿ ಅಭಿನಯಿಸಿದ್ದು, ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಿಡುಗಡೆಯಾದ ಪೋಸ್ಟರ್‌ನಲ್ಲಿ ಅವರು ಕನ್ನಡಕ ಧರಿಸಿ, ಸಿಗರೇಟ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಇದು ಸಿನಿಮಾಗಾಗಿ ತೆಗೆದ ದೃಶ್ಯವಾಗಿದ್ದು, ಅವರ ಪಾತ್ರ ಕಥೆಯಲ್ಲಿ ಮಹತ್ವದ ತಿರುವು ನೀಡಲಿದೆ ಎನ್ನಲಾಗಿದೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿರುವ ಈ ಪ್ಯಾನ್-ಇಂಡಿಯಾ ಸಿನಿಮಾ 2026ರಲ್ಲಿ ತೆರೆಗೆ ಬರಲಿದೆ.
