ಉದಯವಾಹಿನಿ, ವಿಶಾಖಪಟ್ಟಣಂ: ಭರ್ಜರಿ ಸಿಕ್ಸರ್‌ ಬೌಂಡರಿ ಆಟದಲ್ಲಿ ನ್ಯೂಜಿಲೆಂಡ್‌ ಟೀಂ ಇಂಡಿಯಾ ವಿರುದ್ಧ 50 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಗೆಲುವಿನ ಖಾತೆ ತೆರೆದಿದೆ. ಭಾರತ ಈಗಾಗಲೇ ಮೊದಲ 3 ಪಂದ್ಯಗಳಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಟಾಸ್‌ ಸೋತ ನ್ಯೂಜಿಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡಿ 7 ವಿಕೆಟ್‌ ನಷ್ಟಕ್ಕೆ 215 ರನ್‌ ಬಾರಿಸಿತ್ತು. ಗೆಲುವಿಗೆ 216 ರನ್‌ ಗುರಿ ಪಡೆದ ಭಾರತ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್‌ ಆಯಿತು.

ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಶಿವಂ ದುಬೆ ಬ್ಯಾಟಿಂಗ್‌ ಬಲ ತುಂಬಿದ್ದರು. ಭರ್ಜರಿ ಸಿಕ್ಸರ್‌ ಮಳೆ ಸುರಿಸುತ್ತಾ 15 ಎಸೆತಗಳಲ್ಲೇ ಸ್ಫೋಟಕ ಫಿಫ್ಟಿ ಬಾರಿಸಿದ್ದರು. ಒಂದಂತದಲ್ಲಿ ದುಬೆ ಕ್ರೀಸ್‌ನಲ್ಲಿ ಇದ್ದಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆಯಿತ್ತು. ಆದ್ರೆ 15ನೇ ಓವರ್‌ನ ಕೊನೇ ಎಸೆತದಲ್ಲಿ ಹರ್ಷಿತ್‌ ರಾಣಾ ಸ್ಟ್ರೈಕ್‌ ಮಾಡಿದರು. ಈ ವೇಳೆ ಚೆಂಡು ಬೌಲರ್‌ ಮ್ಯಾಟ್‌ ಹೆನ್ರಿ ಅವರ ಕೈಗೆ ತಾಕಿ ವಿಕೆಟ್‌ಗೆ ಬಡಿಯಿತು. ಈ ರನೌಟ್‌ನಿಂದ ಮತ್ತೆ ಗೆಲುವು ಕಿವೀಸ್‌ನತ್ತ ವಾಲಿತು.  ಗೆಲುವಿನ ಗುರಿ ಬೆನ್ನಟ್ಟಿದ ಭಾರತ ತಂಡದ ಶಿವಂ ದುಬೆ 23 ಎಸೆತಗಳಲ್ಲಿ 65ರನ್ ಗಳಿಸಿದರು. ರಿಂಕು ಸಿಂಗ್ 30 ಎಸೆತಗಳಲ್ಲಿ 39ರನ್, ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ 24 ರನ್, ರವಿ ಬಿಷ್ಣೋಯ್ 10 ಎಸೆತಗಳಲ್ಲಿ 10 ರನ್ ಗಳಿಸಿದರು. ಕೊನೆಗೆ ಭಾರತ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ಮಾಡಿದ್ದ ಮಿಚೆಲ್ ಸ್ಯಾಂಟ್ನರ್ 3 ವಿಕೆಟ್, ಇಶ್ ಸೋದಿ ಹಾಗೂ ಜಾಕೋಬ್ ತಲಾ 2 ವಿಕೆಟ್, ಮ್ಯಾಟ್ ಹೆನ್ರಿ, ಝಾಕ್ ತಲಾ 1 ವಿಕೆಟ್ ಪಡೆದರು.

Leave a Reply

Your email address will not be published. Required fields are marked *

error: Content is protected !!