ಉದಯವಾಹಿನಿ , ಬೆಂಗಳೂರು: ಬಳ್ಳಾರಿ ಫೈರಿಂಗ್ ಮತ್ತು ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ವಿಧಾನಸಭೆ ಇಂದು ಶಾಸಕರಾದ ಬಿ. ನಾಗೇಂದ್ರ ಹಾಗೂ ಜನಾರ್ದನ ರೆಡ್ಡಿ ನಡುವೆ ಪರಸ್ಪರ ಮಾತಿನ ಫೈರಿಂಗ್‌ಗೆ ವೇದಿಕೆಯಾಗಿತ್ತು. ಜನಾರ್ದನ ರೆಡ್ಡಿಯವರು ಸದನದಲ್ಲಿ ಬಳ್ಳಾರಿ ಗಲಾಟೆಗೆ ನಾರಾ ಭರತ್ ರೆಡ್ಡಿ ಕಾರಣ, ಕಾಂಗ್ರೆಸ್‌ ಕಾರ್ಯಕರ್ತನ ಸಾವಿಗೆ ಗನ್‌ಮ್ಯಾನ್‌ಗಳು ಕಾರಣ, ಪ್ರಕರಣ ಸಿಬಿಐಗೆ ಕೊಡಬೇಕೆಂದು ಒತ್ತಾಯಿಸಿದ್ರು. ಇಂದು ಶಾಸಕ ಬಿ ನಾಗೇಂದ್ರ ಮಾತಾಡಿ, ಜನಾರ್ದನ ರೆಡ್ಡಿಯವರು ಸದನಕ್ಕೆ ಸುಳ್ಳು ಮಾಹಿತಿ ಕೊಟ್ಟು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿ ಪ್ರಕರಣದ ವಿವರಣೆ ಕೊಡಲು ಮುಂದಾದ್ರು.

ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಹಾಗೂ ಬಿ ನಾಗೇಂದ್ರಗೂ ತೀವ್ರ ವಾಕ್ಸಮರ ನಡೆದು ಸದನ ಗದ್ದಲ, ಕೋಲಾಹಲದಲ್ಲಿ ಮುಳುಗಿತ್ತು. ಮೊದಲು ಮಾತಾಡಿದ ಬಿ ನಾಗೇಂದ್ರ, ರೆಡ್ಡಿ ಮನೆ ಮುಂದೆ ಗಲಾಟೆ ಆದಾಗ ಬಿಜೆಪಿ ಕಾರ್ಯಕರ್ತರು ವಾಲ್ಕೀಕಿ ಫೋಟೋ ಇದ್ದ ಬ್ಯಾನರ್ ಕೆಳಕ್ಕೆ ಹಾಕಿ ಅವಮಾನ ಮಾಡಿದ್ರು. ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಸಾವಾಯ್ತು. ಯಾರು ಕಾರಣ ಅಂತ ತನಿಖೆಯಲ್ಲಿ ಬಹಿರಂಗ ಆಗುತ್ತೆ. ಆದ್ರೆ ನಂತರ ಬಿಜೆಪಿ ನಾಯಕರ ಬಳ್ಳಾರಿಯಲ್ಲಿ ಸಮಾವೇಶದಲ್ಲಿ ಶ್ರೀರಾಮುಲು ಅವರು ಏ ಭರತ್ ರೆಡ್ಡಿ, ಏಯ್ ಕಾಂಗ್ರೆಸ್ ಕಾರ್ಯಕರ್ತರೇ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನೀವೆಲ್ಲಿದ್ರೂ, ಪಾತಾಳದಲ್ಲಿದ್ರೂ ಹುಡುಕಿ ಒದ್ದು ಓಡಿಸ್ತೇವೆ ಅಂದ್ರು.

Leave a Reply

Your email address will not be published. Required fields are marked *

error: Content is protected !!