ಉದಯವಾಹಿನಿ , ಬೆಂಗಳೂರು: ನರೇಗಾ ರದ್ದು ಮಾಡಿ ಕೇಂದ್ರ ಸರ್ಕಾರ ಜಾರಿ ಮಾಡಿರೋ ವಿಬಿಜಿ ರಾಮ್ ಜಿ ಕಾಯ್ದೆ ಬಡವರ ಮರಣ ಶಾಸನ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜ ಕಿಡಿಕಾರಿದರು.
ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡೋ ವೇಳೆ ಮಾತಾಡಿದ ಅವರು, ಮನ್ರೇಗಾದ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ ಆಗಿದೆ. ಮನ್ರೇಗಾ ಯೋಜನೆ ಇಡೀ ವಿಶ್ವ ಒಪ್ಪಿತ್ತು. ಆದ್ರೆ ಬಿಜೆಪಿ ಸರ್ಕಾರ ನರೇಗಾ ರದ್ದು ಮಾಡಿ ವಿಬಿ ಜಿ ರಾಮ್ ಜಿ ಕಾಯ್ದೆ ತಂದಿದ್ದೀರಾ ಯಾಕೆ? ನರೇಗಾ ಯೋಜನೆಯಲ್ಲಿ ಗಾಂಧಿಜೀ ಹೆಸರು ಇತ್ತು ಅಂತ ಕಾಯ್ದೆ ಬದಲಾವಣೆ ಮಾಡಿದ್ದಾರೆ. ಗಾಂಧಿ ಹೆಸರು ತೆಗೆಯೋಕೆ ಕಾಯ್ದೆ ಬದಲಾವಣೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ವಿಬಿಜಿ ರಾಮ್ ಜಿ ಒಂದು ಮರಣ ಶಾಸನದ ಯೋಜನೆ. ಗಾಂಧಿ ಹೆಸರು ಬದಲಾವಣೆ ಮಾಡಿದ್ರು ಪರವಾಗಿಲ್ಲ. ಜನರ ಹೊಟ್ಟೆ ಮೇಲೆ ಯಾಕೆ ಹೊಡೆದ್ರಿ. ಬಿಜೆಪಿ ಅವರು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಗೆ ಮುಂದಾಗಿದ್ದಾರೆ. ವಿಬಿಜಿ ರಾಮ್ ಜಿಯಲ್ಲಿ ಉದ್ಯೋಗ ಭದ್ರತೆ ಇಲ್ಲ. ಮನ್ರೇಗಾ ಯೋಜನೆ ಮರುಸ್ಥಾಪನೆ ಮಾಡಬೇಕು. ಅಲ್ಲಿವರೆಗೂ ನಮ್ಮ ಹೋರಾಟ ಇರಲಿದೆ. ಎಪಿಎಂಸಿ ಕಾಯ್ದೆ ಜಾರಿ ಮಾಡಿದ್ರಿ. ದೊಡ್ಡ ಹೋರಾಟ ಆಗಿ ಕೇಂದ್ರ ಕಾಯ್ದೆ ವಾಪಸ್ ಪಡೆದರು. ಅದೇ ರೀತಿ ಮನರೇಗಾ ವಾಪಸ್ ಬರುತ್ತದೆ ಎಂದು ಭವಿಷ್ಯ ನುಡಿದರು.
