ಉದಯವಾಹಿನಿ , ಲಂಡನ್: ಮುಕ್ತ ವ್ಯಾಪಾರದ ಬೆಂಬಲಿಗರಾಗಿ ಉಭಯ ದೇಶಗಳು ಜಂಟಿಯಾಗಿ ಬಹುಪಕ್ಷೀಯತೆಯನ್ನು ಪ್ರತಿಪಾದಿಸಬೇಕು ಮತ್ತು ಅನುಸರಿಸಬೇಕು ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರಿಗೆ ತಿಳಿಸಿದರು.
ಎಂಟು ವರ್ಷಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ ಮೊದಲ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರೊಂದಿಗೆ ಜಿನ್‌ಪಿಂಗ್ ಅವರು ಬೀಜಿಂಗ್‌ನ ‘ಗ್ರೇಟ್ ಹಾಲ್ ಆಫ್ ದ ಪೀಪಲ್’ನಲ್ಲಿ ಸಭೆ ನಡೆಸಿದರು.
‘ಎಲ್ಲ ದೇಶಗಳು ಪಾಲಿಸಿದರಷ್ಟೆ ಅಂತರರಾಷ್ಟ್ರೀಯ ಕಾನೂನುಗಳು ಪರಿಣಾಮಕಾರಿಯಾಬಲ್ಲವು. ವಿಶೇಷವಾಗಿ ಪ್ರಮು ದೇಶಗಳು ಮುಂದಾಳತ್ವ ವಹಿಸಬೇಕು. ಇಲ್ಲವಾದರೆ, ಜಗತ್ತು ಅರಾಜಕತೆಯತ್ತ ಸಾಗುತ್ತದೆ. ಚೀನಾ ಎಷ್ಟೇ ಬೆಳೆದರೂ ಇತರ ದೇಶಗಳಿಗೆ ಬೆದರಿಕೆ ಒಡ್ಡುವುದಿಲ್ಲ’ ಎಂದು ಜಿನ್‌ಪಿಂಗ್ ಹೇಳಿದ್ದಾರೆ ಎಂದು ರಾಜ್ಯ ಪ್ರಸಾರಕ ಸುದ್ದಿ ಸಂಸ್ಥೆಯೊಂದು ತಿಳಿಸಿದೆ.
‘ಉಭಯ ದೇಶಗಳಿಗೆ ಪ್ರಯೋಜನವಾಗುವ ಸ್ಥಿರ, ದೀರ್ಘಕಾಲೀನ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ತಮ್ಮ ಬದ್ಧತೆಯ ಕುರಿತು ಇಬ್ಬರು ನಾಯಕರು ದೃಢಪಡಿಸಿದ್ದಾರೆ’ ಎಂದು ಲಂಡನ್ ಪ್ರಧಾನಿಯ ಅಧಿಕೃತ ನಿವಾಸ (ಡೌನಿಂಗ್ ಸ್ಟ್ರೀಟ್) ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವುದನ್ನು ಮುಂದುವರಿಸಲು ಮತ್ತು ಭಿನ್ನಾಭಿಪ್ರಾಯ ಹೊಂದಿದ ಕ್ಷೇತ್ರಗಳಲ್ಲಿ ಮುಕ್ತ ಮತ್ತು ಸ್ಪಷ್ಟ ಸಂವಾದ ನಡೆಸುವುದಾಗಿ ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಅದು ತಿಳಿಸಿದೆ.
‘ದೇಶದಲ್ಲಿನ ಬೆಳವಣಿಗೆ ವಿದೇಶದಲ್ಲಿರುವ ವಿಶ್ವದ ಅತಿದೊಡ್ಡ ಶಕ್ತಿಗಳೊಂದಿಗಿನ ನಮ್ಮ ಸಂಬಂಧಕ್ಕೆ ನೇರವಾಗಿ ಸಂಬಂಧಿಸಿದೆ’ ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!