
ಉದಯವಾಹಿನಿ,ಚಿಂಚೋಳಿ; ತಾಲ್ಲೂಕಿನ ಕರ್ಚಖೇಡ ಗ್ರಾಮ ಪಂಚಾಯತನ ವ್ಯಾಪ್ತಿಯ ಇರಗಪಳ್ಳಿ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಶ್ರೀಮಂತ ದೇವಪ್ಪ ಇರಗಪಳ್ಳಿ ಗೆಲುವು ಸಾಧಿಸಿದ್ದಾರೆ ಎಂದು ತಹಸೀಲ್ದಾರ್ ವೀರೇಶ ಮುಳಗುಂದಮಠ ತಿಳಿಸಿದ್ದಾರೆ.
1055 ಮತದಾರರ ಒಟ್ಟು ಸಂಖ್ಯೆಬಲವಿದ್ದು,ಮತದಾನವಾದ 665 ಮತಗಳಲ್ಲಿ 15ಮತಗಳು ತಿರಸ್ಕೃತವಾದರೆ 650 ಮತಗಳು ಕ್ರಮಬದ್ದವಾಗಿದ್ದು,ಪ್ರತಿಸ್ವರ್ಧಿ 185ಮತಗಳು ಪಡೆದರೆ ಶ್ರೀಮಂತ ದೇವಪ್ಪ 465 ಮತಗಳು ಪಡೆದು 280ಮತಗಳ ಅಂತದಿಂದ ಗೆಲುವು ಸಾಧಿಸಿದ್ದು ಘೋಷಣೆ ಪ್ರಮಾಣಪತ್ರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಶೋಕ ಹೂವಿನಬಾವಿ ಸೇರಿದಂತೆ ಅನೇಕರಿದ್ದರು.
