ಉದಯವಾಹಿನಿ, ಔರಾದ್ : ಭಾರತ ವಿಶ್ವದಲ್ಲೇ ಶ್ರೇಷ್ಠ ದೇಶವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ವಿಜಯ ಅಪರೇಷನ್ ಕೈಗೊಂಡು ಭಾರತೀಯ ಯೋಧರು ವಿಜಯ ಸಾಧಿಸಿದ ಪ್ರಯುಕ್ತ ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿರುವ ಭಾರತೀಯರಿಗೆ ಈ ದಿನ ಹೆಮ್ಮೆ ದಿನ ಎಂದು ಉಪನ್ಯಾಸಕ ಶಿವಪುತ್ರ ಧರಣಿ ಹೇಳಿದರು.ಸಂತಪುರ್ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುದುವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ ಭಾರತೀಯ ಪ್ರತಿಯೊಬ್ಬ ಪ್ರಜೆಗೆ ಹೆಮ್ಮೆ ಪ್ರತಿಕ ಈ ದಿನವಾಗಿದೆ. ಅವಕಾಶ ಸಿಕ್ಕಾಗ ದೇಶ ಸೇವೆಗೆ ಎಲ್ಲಾ ಭಾರತೀಯರು ಮುಂದಾಗಬೇಕು ಎಂದು ಹೇಳಿದರು. ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ಈರಮ್ಮ ಕಟಗಿ, ವನದೇವಿ ಎಕ್ಕಳೆ ಮತ್ತು ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *

error: Content is protected !!